ETV Bharat / snippets

ಸರಯೂ ನದಿಯಲ್ಲಿ ಮುಳುಗಿದ 9 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ: ಓರ್ವ ಕಾಣೆ, 8 ಮಂದಿಯ ರಕ್ಷಣೆ

author img

By ETV Bharat Karnataka Team

Published : Aug 3, 2024, 6:25 AM IST

Ayodhya: Boat carrying 9 pilgrims capsizes in Saryau river; 1 missing
ಅಯೋಧ್ಯೆ ಸರಯೂ ನದಿಯಲ್ಲಿ ಮುಳುಗಿದ 9 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ: ಓರ್ವ ಕಾಣೆ, 8 ಮಂದಿಯ ರಕ್ಷಣೆ (IANS)

ಅಯೋಧ್ಯೆ, ಉತ್ತರಪ್ರದೇಶ: ಅಯೋಧ್ಯೆಯ ಸರಯೂ ನದಿಯಲ್ಲಿ ಶುಕ್ರವಾರ ಒಂಬತ್ತು ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಗುಚಿದೆ. ಈ ಘಟನೆಯಲ್ಲಿ ಓರ್ವ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆ ಪ್ರಕಾರ, ಸ್ಥಳೀಯ ಡೈವರ್ಸ್ ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಎಂಟು ಜನರನ್ನು ರಕ್ಷಿಸಿದರೆ, ಕಾಶಿಶ್ ಎಂದು ಗುರುತಿಸಲಾದ 29 ವರ್ಷದ ಮಹಿಳೆ ಕಾಣೆಯಾಗಿದ್ದಾರೆ. "ಬೋಟ್ ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದಿದ್ದರಿಂದ ಅದು ಮಗುಚಿ ಬಿದ್ದಿದೆ. ಬೋಟ್‌ನಲ್ಲಿದ್ದವರೆಲ್ಲರೂ ಲೈಫ್ ಜಾಕೆಟ್‌ಗಳನ್ನು ಧರಿಸಿದ್ದರಿಂದ ಯಾವುದೇ ಅಪಾಯ ಆಗಿಲ್ಲ.

ಆದರೆ ಒಬ್ಬ ಮಹಿಳೆ ನಾಪತ್ತೆಯಾಗಿದ್ದಾರೆ. ಅವರು ಕೂಡಾ ಲೈಫ್ ಜಾಕೆಟ್ ಹೊಂದಿದ್ದರು. ರಕ್ಷಣಾ ತಂಡಗಳು ಅವರನ್ನು ಹುಡುಕಲು ಪ್ರಯತ್ನಿಸುತ್ತಿವೆ" ಎಂದು ಅಯೋಧ್ಯೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ಹೇಳಿದ್ದಾರೆ. ನದಿಯಲ್ಲಿ ದೋಣಿ ತಿರುವು ಪಡೆದುಕೊಳ್ಳುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ

ಇದನ್ನು ಓದಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ಇಸ್ರೇಲ್​ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.