ಕರ್ನಾಟಕ

karnataka

ETV Bharat / videos

ಧಾರವಾಡದಲ್ಲಿ ಸೋಬಾನೆ ಪದ ಹಾಡಿ ಮಹಿಳೆಯರಿಂದ ಯೋಗ ದಿನಾಚರಣೆ - Yoga Day in Dharwad - YOGA DAY IN DHARWAD

By ETV Bharat Karnataka Team

Published : Jun 21, 2024, 2:21 PM IST

ಧಾರವಾಡ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಧಾರವಾಡದ ಯೋಗ ಸಮಿತಿ ಮಹಿಳೆಯರು ಸೋಬಾನೆ ಪದ ಹಾಡಿ, ಬೀಸುವ ಕಲ್ಲಿನ ರೀತಿಯಲ್ಲಿ ಯೋಗ ಮಾಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಧಾರವಾಡದ ಎಪಿಎಂಸಿಯಲ್ಲಿ ಆಚರಿಸಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಸೋಬಾನ ಪದ ಹಾಡಿ ಯೋಗ ಮಾಡಿದರು. ಮಹಿಳೆಯರು ಒಬ್ಬರಿಗೊಬ್ಬರು ಕೈಹಿಡಿದು ಜಾನಪದ ಹಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ. 

ಇನ್ನೂ ಜಿಲ್ಲಾಡಳಿತದಿಂದಲೂ ಯೋಗ ದಿನಾಚರಣೆ ಆಚರಿಸಲಾಯಿತು. ನಗರದ ಆರ್​ಎನ್​ ಶೆಟ್ಟಿ ಮೈದಾನದ ಒಳ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಎಸ್​ಪಿ ಗೋಪಾಲಕೃಷ್ಣ ಬ್ಯಾಕೋಡ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಇನ್ನುಳಿದಂತೆ ಜಿಲ್ಲೆಯಲ್ಲಿ ವಿವಿಧ ಶಾಲಾ ಕಾಲೇಜು, ವಿವಿಧ ಸಂಘ ಸಂಸ್ಥೆಗಳಲ್ಲಿ ಯೋಗ ದಿನಾಚರಣೆ ಮಾಡಲಾಗಿದೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಯೋಗ ದಿನಾಚರಣೆ: ಸಿಎಂ ಸಿದ್ದರಾಮಯ್ಯ ಜೊತೆ ವೇದಿಕೆ ಹಂಚಿಕೊಂಡ ನಟಿ ಶ್ರೀಲೀಲಾ - Sreeleela Yoga with CM Siddaramaiah

ಇದನ್ನೂ ಓದಿ: ಶಿವಮೊಗ್ಗದಲ್ಲಿ ಯೋಗ ದಿನದ ಸಡಗರ: ತುಮಕೂರಿನಲ್ಲಿ ಸಚಿವ ಸೋಮಣ್ಣರಿಂದ ಯೋಗಾಸನ - Yoga Day 2024

ABOUT THE AUTHOR

...view details