ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯಗೆ ಗ್ರಾಮಸ್ಥರಿಂದ ಘೇರಾವ್: ವಿಡಿಯೋ
Published : Mar 8, 2024, 1:24 PM IST
ಮೈಸೂರು: ಗ್ರಾಮಕ್ಕೆ ಹಲವು ವರ್ಷಗಳಿಂದ ರಸ್ತೆಯನ್ನೇ ಮಾಡಿಲ್ಲ. ಈಗ ಕುಂದುಕೊರತೆ ಆಲಿಸಲು ಏಕೆ ಬಂದಿದ್ದೀರಿ? ಎಂದು ಯತೀಂದ್ರ ಸಿದ್ದರಾಮಯ್ಯಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ವರುಣಾದ ಮುದ್ದುಬೀರನಹುಂಡಿ ಗ್ರಾಮದಲ್ಲಿ ಇಂದು ನಡೆಯಿತು.
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದ ಎಲ್ಲ ಕೆಲಸ ಕಾರ್ಯಗಳನ್ನು ತಂದೆಯ ಪರವಾಗಿ ಪುತ್ರ ಹಾಗು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದುಕೊರತೆ ಆಲಿಸಲು ವರುಣಾ ವ್ಯಾಪ್ತಿಯ ಮುದ್ದುಬೀರನಹುಂಡಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮಸ್ಥರು, ಹಲವು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ರಸ್ತೆ ಸರಿ ಇಲ್ಲ, ಇತರ ಯಾವುದೇ ಕೆಲಸಗಳನ್ನೂ ಮಾಡದೇ ನಿರ್ಲಕ್ಷ್ಯ ವಹಿಸಿದ್ದೀರಿ. ಕೆಲವು ಕಾಮಗಾರಿಗಳು ಅರ್ಧ ಮುಗಿದಿವೆ. ಈಗೇಕೆ ಕುಂದುಕೊರತೆ ಆಲಿಸಲು ಬಂದಿದ್ದೀರಿ? ಎಂದು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.
ಹೀಗಾಗಿ ಆತುರಾತುರವಾಗಿ ಕೆಲವು ಅರ್ಜಿಗಳನ್ನು ಪಡೆದ ಯತೀಂದ್ರ ಸಿದ್ದರಾಮಯ್ಯ ಸ್ಥಳದಿಂದ ಹೊರಟು ಹೋದರು. ಮನವೊಲಿಸಲು ಪೊಲೀಸರು ಯತ್ನಿಸಿದ್ದು ಫಲ ನೀಡಲಿಲ್ಲ.
ಇದನ್ನೂ ಓದಿ: ಬೇಬಿಬೆಟ್ಟದಲ್ಲಿ ಪ್ರಾಯೋಗಿಕ ಸ್ಫೋಟಕ್ಕೆ ರೈತ ಮುಖಂಡರ ವಿರೋಧ: ಸಚಿವ ಚಲುವರಾಯಸ್ವಾಮಿ ಸಭೆಯಲ್ಲಿ ಗದ್ದಲ