ಕರ್ನಾಟಕ

karnataka

ETV Bharat / videos

ಚಾಮರಾಜನಗರ: ಕಾಡಾನೆ ಸಾವು, ಕಳೇಬರದ ಬಳಿ ಗುಂಪಿನ ಇತರ ಆನೆಗಳ ಮೂಕ ರೋಧನೆ - wild elephant died

By ETV Bharat Karnataka Team

Published : Jul 3, 2024, 10:35 PM IST

ಚಾಮರಾಜನಗರ: ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಕೊಳ್ಳೇಗಾಲ ತಾಲೂಕಿನ ಮತ್ತಿಪುರ ಬಳಿ ನಡೆದಿದೆ. ಆನೆಯ ಕಳೇಬರದ ಬಳಿ ಬುಧವಾರ ಬೆಳಗ್ಗೆಯಿಂದಲೂ ಗುಂಪಿನ ಇತರ ಕಾಡಾನೆಗಳು ಬೀಡುಬಿಟ್ಟು ಮೂಕ ರೋಧನೆ ಅನುಭವಿಸುತ್ತಿವೆ. ಇನ್ನು ಮೃತ ಹೆಣ್ಣಾನೆ ಬಳಿ ಮರಿಯಾನೆಯೂ ಇದೆ. ಆನೆಗಳ ಹಿಂಡು ಸ್ಥಳದಲ್ಲೇ ಬೀಡುಬಿಟ್ಟಿರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಳೇಬರದ ಬಳಿ ತೆರಳಲು ಸಾಧ್ಯವಾಗುತ್ತಿಲ್ಲ. ಇನ್ನು ಆನೆ ಯಾವ ಕಾರಣಕ್ಕೆ ಮೃತಪಟ್ಟಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ. 

ಮರಿಯಾನೆಯನ್ನು ತಾಯಿ ಮಡಿಲು ಸೇರಿದ್ದಅರಣ್ಯ ಇಲಾಖೆ: ಇತ್ತೀಚಿಗೆ, ತಾಯಾನೆಯಿಂದ ಬೇರ್ಪಟ್ಟು ಅಸ್ವಸ್ಥಗೊಂಡಿದ್ದ ಮರಿಯಾನೆಗೆ ಅರಣ್ಯ ಇಲಾಖೆ ಚಿಕಿತ್ಸೆ ಕೊಟ್ಟು ಆರೈಕೆ ಮಾಡಿ ಮತ್ತೆ ತಾಯಿಯ ಮಡಿಲು ಸೇರಿಸಿದ ಘಟನೆ ಚಾಮರಾಜನಗರದ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದಲ್ಲಿ ನಡೆದಿತ್ತು. ಅಂದಾಜು ಎರಡ್ಮೂರು ವರ್ಷದ ಗಂಡಾನೆ ಮರಿ ಮರಳಿ ತಾಯಾನೆ ಸೇರಿತ್ತು.

ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10ರಂದು ಇಲಾಖಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಜಯಣ್ಣ ಎಂಬವರ ಜಮೀನಿನಲ್ಲಿ ಮರಿಯಾನೆಯೊಂದು ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಬಂಡೀಪುರದ ಅರಣ್ಯಾಧಿಕಾರಿಗಳು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ, ಅಷ್ಟರಲ್ಲಾಗಲೇ ಮರಿ ಅರಸುತ್ತಾ ಬಂದ ತಾಯಾನೆ ಚಿಕಿತ್ಸೆ ಕೊಡಲು ಬಂದಿದ್ದ ಸಿಬ್ಬಂದಿ ಮೇಲೆ ದಾಳಿ ಮಾಡಲು ಮುಂದಾಯಿತು. ಆದರೂ ಹರಸಾಹಸದಿಂದ ವೈದ್ಯರು ಮರಿಯಾನೆಗೆ ಆರೈಕೆ ಮಾಡಿ, ಚೇತರಿಕೆ ಕಂಡುಬಂದ ನಂತರ ತಾಯಾನೆ ಮಡಿಲಿಗೆ ಸೇರಿಸಿದ್ದರು.

ಇದನ್ನೂ ಓದಿ: ಬಂಡೀಪುರ: ಕೆರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹುಲಿಯನ್ನು ಅಟ್ಟಾಡಿಸಿದ ಗಜರಾಜ- ವಿಡಿಯೋ - Elephant chased Tiger

ABOUT THE AUTHOR

...view details