ಕುಕ್ಕೆ ಸುಬ್ರಹ್ಮಣ್ಯ: ಶಾಲಾ ಪ್ರದೇಶದ ಸಮೀಪ ರಸ್ತೆ ದಾಟಿದ ಆನೆ- ವಿಡಿಯೋ - Wild Elephant
Published : Mar 8, 2024, 9:56 AM IST
ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಕಾಡಾನೆಯೊಂದು ಶಾಲಾ ಪ್ರದೇಶದ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಎಂಬಲ್ಲಿ ಮಾರ್ಚ್ 6ರ ಸಂಜೆ ನಡೆದಿದೆ. ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಐನೆಕಿದು ಕಡೆಯಿಂದ ಕೋಟೆ ಸಂಪರ್ಕಿಸುವ ರಸ್ತೆಯನ್ನು ಸಲಗ ದಾಟಿದೆ. ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿದ್ದಾರೆ. ಆನೆ ಪ್ರತ್ಯಕ್ಷವಾಗಿದ್ದರಿಂದ ರಾತ್ರಿ ವೇಳೆ ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹೀಗಿದ್ದರೂ ಸ್ಥಳೀಯರಿಗೆ ಆನೆ ದಾಳಿಯ ಆತಂಕವಿದೆ.
ಫೆಬ್ರುವರಿ ತಿಂಗಳ ಕೊನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹೊನ್ನಾಳು ಗ್ರಾಮದ ಸಮೀಪ ರಸ್ತೆಯಲ್ಲಿ ಕಾಡಾನೆ ಹಾಗೂ ಮರಿ ಪ್ರತ್ಯಕ್ಷವಾಗಿ ವಾಹನ ಸವಾರರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ತಾಯಿ ಹಾಗು ಮರಿಯಾನೆ ರಾತ್ರಿ ವೇಳೆ ರಸ್ತೆ ದಾಟುತ್ತಾ ಕಾಡು ಸೇರಿದ್ದವು. ಕರಾವಳಿ, ಮಲೆನಾಡು ಭಾಗದಲ್ಲಿ ಪದೇ ಪದೆ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದ್ದು ರಸ್ತೆ ತೋಟ ಹೀಗೆ ಎಲ್ಲೆಂದರಲ್ಲಿ ದಾಳಿಯನ್ನೂ ಮಾಡುತ್ತಿವೆ. ಇದಕ್ಕೆ ಶಾಶ್ವತ ಪರಿಹಾರವನ್ನು ಅರಣ್ಯ ಇಲಾಖೆ, ಸರ್ಕಾರ ಒದಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.
ಇದನ್ನೂ ಓದಿ: ಬೆಳಗಾವಿಯಲ್ಲಿ ಬೆಳ್ಳಂಬೆಳಿಗ್ಗೆ ಗಜರಾಜ ಪ್ರತ್ಯಕ್ಷ: ಆತಂಕಗೊಂಡ ಜನರು