ಕರ್ನಾಟಕ

karnataka

ETV Bharat / videos

Watch: ಕಾಡಿನಲ್ಲಿ ಪ್ರಾಬಲ್ಯಕ್ಕಾಗಿ ಮದಗಜಗಳ ನಡುವೆ ರೋಚಕ, ರಣರೋಚಕ ಕಾಳಗ: ಕಾಡಾನೆ ಅಟ್ಟಾಡಿಸಿದ ಒಂಟಿ ಸಲಗ!! - Wild Elephant Video - WILD ELEPHANT VIDEO

By ETV Bharat Karnataka Team

Published : Jun 8, 2024, 2:10 PM IST

ಮೈಸೂರು: ಕಾಡಿನಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಯ ಪ್ರಾಬಲ್ಯಕ್ಕಾಗಿ ಎರಡು ಗಜಗಳ ನಡುವೆ ಕಾದಾಟ ನಡೆದಿದೆ. ವಯಸ್ಸಾದ ಆನೆಯೊಂದಿಗೆ ಕಾದಾಟಕ್ಕೆ ಇಳಿದ ಮತ್ತೊಂದು ಆನೆಯು, ಅದನ್ನು ಅಟ್ಟಾಡಿಸಿದ ಘಟನೆ ಕಬಿನಿ ಹಿನ್ನೀರಿನ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಜರುಗಿದೆ. ಈ ದೃಶ್ಯವನ್ನು ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಪ್ರದೇಶ ಎಂಬ ಖ್ಯಾತಿಗೆ ಪಾತ್ರವಾಗಿರುವ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ದಿನನಿತ್ಯ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಕೆಲ ಕಾಡು ಪ್ರಾಣಿಗಳು ತಮ್ಮ ಟೆರಿಟರಿಗಾಗಿ ಕಾದಾಟ ಮಾಡುತ್ತಿರುತ್ತವೆ. ಹುಲಿಗಳೂ ಕೂಡ ತಮ್ಮ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲು ಕಾದಾಟಕ್ಕಿಳಿಯುತ್ತವೆ. ಈ ಸಂದರ್ಭದಲ್ಲಿ ಕೆಲವು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ.

ಇವುಗಳನ್ನೂ ಓದಿ: Watch: ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗದ ದಾಳಿ: ಜಾನುವಾರುಗಳನ್ನು ಅಟ್ಟಾಡಿಸಿದ ಕಾಡಾನೆ - WILD ELEPHANT ATTACK

ಮೈಸೂರು: ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ, ಮತ್ತೆ ಕಾಡಿಗೆ ಅಟ್ಟಿದ ಗ್ರಾಮಸ್ಥರು - Elephant attack

ನಡುರಸ್ತೆಯಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ: ಹೆದ್ದಾರಿಯಲ್ಲಿ ತಾಯಿ ಆನೆ ರೋದನೆ - Baby Elephant Died

ABOUT THE AUTHOR

...view details