ಹುಬ್ಬಳ್ಳಿಯಲ್ಲಿ ಫ್ಲೈಓವರ್ ಕಾಮಗಾರಿ ಎಡವಟ್ಟು; ಚನ್ನಮ್ಮ ವೃತ್ತದಲ್ಲಿ ಕಾರಂಜಿಯಂತೆ ಚಿಮ್ಮಿದ ನೀರು - Water leakage - WATER LEAKAGE
Published : Oct 6, 2024, 3:22 PM IST
ಹುಬ್ಬಳ್ಳಿ : ನಗರದ ಚನ್ನಮ್ಮ ಸರ್ಕಲ್ ಬಳಿ ಫ್ಲೈಓವರ್ ಕಾಮಗಾರಿಯ ವೇಳೆ ಮತ್ತೊಂದು ಅವಘಡ ಸಂಭವಿಸಿದೆ. ಕಾಮಗಾರಿ ವೇಳೆ ನೀರು ಸರಬರಾಜು ಮಾಡುವ ದೊಡ್ಡ ಪೈಪ್‌ಗೆ ಹಾನಿಯಾದ ಪರಿಣಾಮ, ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.
ಫ್ಲೈ ಓವರ್‌ನ ಪಿಲ್ಲರ್ ಅಳವಡಿಸಲು ಜೆಸಿಬಿಯಿಂದ ತಗ್ಗು ತೆಗೆಯುವ ಸಮಯದಲ್ಲಿ ಪೈಪ್‌ಗೆ ಹಾನಿಯಾಗಿದೆ. ಇದರಿಂದಾಗಿ ಆಕಾಶದೆತ್ತರಕ್ಕೆ ನೀರು ಚಿಮ್ಮಿದೆ. ನೀರು ಚಿಮ್ಮಿದ್ದರಿಂದ ದಾರಿಹೋಕರಿಗೆ ತೀವ್ರ ಸಮಸ್ಯೆಯನ್ನು ಸೃಷ್ಟಿಸಿತ್ತು. ಸಾರ್ವಜನಿಕರು ರಸ್ತೆಯುದ್ದಕ್ಕೂ ನಿಂತು ಈ ದೃಶ್ಯಗಳನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯ ಕಂಡುಬಂತು. ಕೊನೆಗೆ ಹರಸಾಹಸಪಟ್ಟು ನೀರು ಸರಬರಾಜು ಬಂದ್ ಮಾಡಿದ್ದರಿಂದ ನೀರು ಪೋಲಾಗುವುದನ್ನು ತಡೆಯಲಾಯಿತು.
ಸೋರಿದ ಮೇಲ್ಛಾವಣಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮಿಷನರ್ ಕಚೇರಿ ಮೇಲಿರುವ ಸಭಾಂಗಣದ ಮೇಲ್ಛಾವಣಿ (ಜುಲೈ 25-24) ಮಳೆಯಿಂದಾಗಿ ಸೋರಿದ ವರದಿಯಾಗಿತ್ತು. ತೇಪೆ ಹಾಕುವ ರೀತಿಯಲ್ಲಿ ಪ್ಲಾಸ್ಟಿಕ್ ಹೊದಿಸಿದ್ದರೂ ಕೂಡ ಸೋರುವುದು ಮಾತ್ರ ನಿಂತಿರಲಿಲ್ಲ.
ಈ ಕಟ್ಟಡ ಬ್ರಿಟಿಷ್ ಕಾಲದ ವಾಸ್ತು ಶೈಲಿಯನ್ನು ಹೊಂದಿದ್ದು, ಸಂಪೂರ್ಣ ಕಟ್ಟಿಗೆಯಿಂದ ನಿರ್ಮಾಣ ಮಾಡಲಾಗಿದೆ. ಪುರಾತನ ಹಾಗೂ ಪಾರಂಪರಿಕ ಕಟ್ಟಡವು ಇದಾಗಿದ್ದರಿಂದ ಸತತ ಮಳೆಗೆ ಕಟ್ಟಿಗೆಗಳು ನೆನೆಯುವ ಭೀತಿ ಶುರುವಾಗಿತ್ತು.
ಇದನ್ನೂ ಓದಿ : ಮಳೆಗೆ ಸೋರುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಐತಿಹಾಸಿಕ ಕಟ್ಟಡ! - LEAKAGE IN CORPORATION BUILDING