ಮೈಸೂರು: ಕಾಡಿನಿಂದ ನಾಡಿಗೆ ಬಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರು - ಮೈಸೂರು ಸುದ್ದಿ
Published : Jan 23, 2024, 6:25 PM IST
ಮೈಸೂರು: ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದ ಜಿಂಕೆಯೊಂದನ್ನು ರಕ್ಷಣೆ ಮಾಡಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿರುವ ಮಾನವೀಯ ಘಟನೆ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದಲ್ಲಿ ಇಂದು ನಡೆದಿದೆ. ಮಂಗಳವಾರ ಬೆಳಗ್ಗೆ ಕಾಡಿನಿಂದ ಗ್ರಾಮಕ್ಕೆ ಬಂದ ಜಿಂಕೆಯೊಂದು ಏಕಾಏಕಿ ಮನೆಯೊಂದರ ಒಳಗೆ ನುಗ್ಗಿದೆ. ಇದನ್ನು ಕಂಡು ಮನೆಯ ನಿವಾಸಿಗಳು ಗಾಬರಿಗೊಂಡಿದ್ದಾರೆ. ನಂತರ ಊರಿನ ಜನರೆಲ್ಲಾ ಸೇರಿ ಜಿಂಕೆಯನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿದಾಗ ಅವರಿಗೆ ಜಿಂಕೆಯನ್ನು ಒಪ್ಪಿಸಿದ್ದಾರೆ.
ಕಾಡಂಚಿನ ಪ್ರದೇಶವಾಗಿರುವ ಈ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಹುಲಿ, ಚಿರತೆಯಂಥಹ ಪ್ರಾಣಿಗಳ ಭಯವೂ ಇದೆ. ಈ ರೀತಿ ಆದರೆ ನಾವು ಬದುಕುವುದು ಹೇಗೆ ಎಂದು ಗ್ರಾಮಸ್ಥರು ತಮ್ಮ ಆತಂಕದ ಬಗ್ಗೆ ಹೇಳಿಕೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ನೋಡಿ: ಮಂಡ್ಯ ಸಮೀಪ ಕಾಡಾನೆಗಳ ಹಿಂಡು; ಕಾಡಿಗೆ ಓಡಿಸಲು ಇಸ್ರೇಲ್ ತಂಡದಿಂದ ಡ್ರೋನ್ ಕಾರ್ಯಾಚರಣೆ- ವಿಡಿಯೋ