ಕರ್ನಾಟಕ

karnataka

ETV Bharat / videos

ಕೊಟ್ಟ ಕಾಸಿಗೆ ಪೆಟ್ರೋಲ್ ಹಾಕಿಲ್ಲ ಎಂದು ಪ್ರಶ್ನಿಸಿದ್ದ ಬೈಕ್ ಸವಾರನ ಮೇಲೆ ಹಲ್ಲೆ: ಇಬ್ಬರ ಬಂಧ‌ನ - Assaulting biker at petrol station - ASSAULTING BIKER AT PETROL STATION

By ETV Bharat Karnataka Team

Published : Mar 22, 2024, 6:33 PM IST

ಬೆಂಗಳೂರು : ಪಾವತಿಸಿದ ಹಣಕ್ಕೆ ಪೆಟ್ರೋಲ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಅಬೂಬಕರ್ ಸಹೋದರ ನೀಡಿದ ದೂರಿನ‌ ಮೇರೆಗೆ ಪೆಟ್ರೋಲ್ ಬಂಕ್​ನ ಮ್ಯಾನೇಜರ್ ಸುರೇಶ್, ಸಿಬ್ಬಂದಿ ದೇವರಾಜ್ ಎಂಬುವವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ ಬಂಕ್ ಮಾಲೀಕ ರಂಗಸ್ವಾಮಿ ಹಾಗೂ ಸಿಬ್ಬಂದಿ ದೇವರಾಜ್ ಪರಾರಿಯಾಗಿದ್ದು, ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗುರುವಾರ ಬೆಳಗ್ಗೆ 10.30 ಸುಮಾರಿಗೆ ಪೀಣ್ಯ 2ನೇ ಹಂತದಲ್ಲಿರುವ ಹೆಚ್.ಪಿ ಪೆಟ್ರೋಲ್ ಬಂಕ್​ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಅಬೂಬಕರ್ ಬಂದಿದ್ದರು. 480 ರೂಪಾಯಿಗೆ ಪೆಟ್ರೋಲ್ ಹಾಕಿಸಿಕೊಂಡಿದ್ದರು. ಆದರೆ, ಪಾವತಿಸಿದ ಹಣಕ್ಕೆ‌ ಸರಿಯಾಗಿ ಪೆಟ್ರೋಲ್ ದರದ ಸೂಚಕ ಅಸ್ಪಷ್ಟವಾಗಿರುವುದನ್ನು ಕಂಡು ಬಿಲ್ ನೀಡುವಂತೆ ಮನವಿ ಮಾಡಿದ್ದರು. ಬಳಿಕ ಪೂರ್ಣ ಪ್ರಮಾಣದಲ್ಲಿ ಪೆಟ್ರೋಲ್ ಹಾಕಿಲ್ಲ ಎಂದು ಅಪಾದಿಸಿದ್ದರು. 

ಇದಕ್ಕೆ ಸಿಬ್ಬಂದಿಯು 480 ರೂಪಾಯಿ ಪೆಟ್ರೋಲ್​ ಹಾಕಿರುವುದಕ್ಕೆ ಬೇರೆ ಬಿಲ್ ನೀಡಿದ್ದಕ್ಕೆ  ಅನುಮಾನಗೊಂಡು ಪೆಟ್ರೋಲ್ ವಿಚಾರದಲ್ಲಿ ಮೋಸವಾಗಿದೆ ಎಂದು ಧ್ವನಿ ಏರಿಸಿದ್ದ‌‌ರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮೂವರು ಸಿಬ್ಬಂದಿ ಬೈಕ್ ಸವಾರನ ಜೊತೆ ಮಾತಿನ ಚಕಮಕಿಗಿಳಿದಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ಸಿಬ್ಬಂದಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೆಟ್ರೋಲ್ ಬಂಕ್ ಮಾಲೀಕ ರಂಗಸ್ವಾಮಿ ಸಹ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲು ಮಾಡಿದ್ದರು.     

ಇದನ್ನೂ ಓದಿ : ಚಿಕ್ಕೋಡಿ: ಪಿಡಿಒ ಮೇಲೆ ಗ್ರಾ.ಪಂ. ಸದಸ್ಯನಿಂದ ಹಲ್ಲೆ ಆರೋಪ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details