ಕರ್ನಾಟಕ

karnataka

ETV Bharat / videos

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಿಡಿಲು ಸಹಿತ ಧಾರಾಕಾರ ಮಳೆ- ವಿಡಿಯೋ - Rain in Dakshina Kannada - RAIN IN DAKSHINA KANNADA

By ETV Bharat Karnataka Team

Published : Mar 24, 2024, 9:58 AM IST

ಕಡಬ(ದಕ್ಷಿಣ ಕನ್ನಡ): ಜಿಲ್ಲೆಯ ಕಡಬ, ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶನಿವಾರ ಸಂಜೆ ಸಿಡಿಲುಸಹಿತ ಧಾರಾಕಾರ ಮಳೆ ಸುರಿಯಿತು. ಕಡಬ ತಾಲೂಕಿನ ಕೋಡಿಂಬಾಳ, ಮರ್ಧಾಳ, ಕುಂತೂರು, ಕುಟ್ರುಪಾಡಿ ಸೇರಿದಂತೆ ಹಲವೆಡೆ ಮತ್ತು ಸುಳ್ಯ ನಗರ ಪ್ರದೇಶ, ಕೊಲ್ಲಮೊಗ್ರ, ಕಲ್ಲಾಜೆ, ಬಳ್ಪ, ಗುತ್ತಿಗಾರು, ಮರ್ಕಂಜ, ಎಲಿಮಲೆ, ಸಂಪಾಜೆ, ಪಂಜ, ಅರಂತೋಡು ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆ ಬಿದ್ದಿದೆ.

ಈ ಎಲ್ಲಾ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆಗೆ ಅತ್ಯಧಿಕ ತಾಪಮಾನ ಕಂಡುಬಂದಿತ್ತು. ಶುಕ್ರವಾರ ಸಂಜೆಯೂ ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಸಾಮಾನ್ಯ ಮಳೆ ಸುರಿದಿತ್ತು. ನಿನ್ನೆ ಸಂಜೆಯಿಂದ ಕಡಬದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆ ಕಾಡು ಗುಡ್ಡಗಳಿಂದ ಸುತ್ತುವರೆದಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ಬೇಗ ಮಳೆಗಾಲ ಪ್ರಾರಂಭವಾಗುವುದಲ್ಲದೇ ದಾಖಲೆ ಮಟ್ಟದಲ್ಲಿ ಮಳೆ ಬೀಳುತ್ತದೆ. ಒಮ್ಮೆ ಶುರುವಾಗುವ ಮಳೆ ವರ್ಷದ ಕೊನೆಯವರೆಗೂ ಇಲ್ಲಿ ಸುರಿಯುತ್ತಿರುತ್ತದೆ.  

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರ ಮುಖದಲ್ಲಿ ಮಂದಹಾಸ - heavy rain in chikkamagalur

ABOUT THE AUTHOR

...view details