ತೆರವಿನ ವೇಳೆ ಶ್ರೀರಾಮನ ಕಟೌಟ್ ಬಿದ್ದು ಗಾಯಗೊಂಡ ಮೂವರು ಪಾದಚಾರಿಗಳು - ಎಚ್ಎಎಲ್ ಏರ್ ಪೋರ್ಟ್ ರೋಡ್
Published : Jan 31, 2024, 9:17 PM IST
ಬೆಂಗಳೂರು : ಅಯೋಧ್ಯೆಯ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ವೇಳೆ ನಿರ್ಮಿಸಲಾಗಿದ್ದ ಶ್ರೀರಾಮನ ಕಟೌಟ್ ತೆರವುಗೊಳಿಸುವಾಗ ಅಚಾನಕ್ಕಾಗಿ ಬಿದ್ದು ಮೂವರು ಪಾದಚಾರಿಗಳು ಗಾಯಗೊಂಡಿರುವ ಘಟನೆ ಎಚ್ಎಎಲ್ ಏರ್ ಪೋರ್ಟ್ ರೋಡ್ನಲ್ಲಿ ನಡೆದಿದೆ.
ಎಚ್ಎಎಲ್ ವಿಮಾನ ನಿಲ್ದಾಣದ ಪಕ್ಕದಲ್ಲೇ ಹಾಕಲಾಗಿದ್ದ ಶ್ರೀರಾಮನ ಬೃಹತ್ ಕಟೌಟ್ ಮುರಿದು ಬಿದ್ದಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ದಿನದಂದು ಹಾಕಲಾಗಿದ್ದ ಕಟೌಟ್ನ ಕಾರ್ಯಕ್ರಮ ಮುಗಿದು 10 ದಿನಗಳಾದರೂ ಕಟೌಟ್ ತೆರವುಗೊಳಿಸಿರಲಿಲ್ಲ. ಕಟೌಟ್ ಗಾಳಿಗೆ ಸಡಿಲಗೊಂಡು ಇಂದು ಮಧ್ಯಾಹ್ನ ಮುರಿದುಬಿದ್ದಿದೆ ಎಂಬುದಾಗಿ ತಿಳಿದುಬಂದಿದೆ.
ಕಟೌಟ್ ಬಿದ್ದ ಸಮಯದಲ್ಲಿ ಪಾದಚಾರಿ ಮಾರ್ಗದಲ್ಲಿ ಸಾಗುತ್ತಿದ್ದವರ ಮೇಲೆ ಬಿದ್ದ ಪರಿಣಾಮ ಮೂರು ಜನ ಪಾದಚಾರಿಗಳು ಗಾಯಗೊಂಡಿದ್ದಾರೆ. ಸದ್ಯ ಮೂವರು ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜೀವನ್ ಭೀಮಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗಾಯಾಳುಗಳಿಂದ ಮಾಹಿತಿ ಕಲೆ ಹಾಕಿದ ಪೊಲೀಸರು : ನಟ ಯಶ್ ಬರ್ತ್ಡೇ ಕಟೌಟ್ ನಿಲ್ಲಿಸುವಾಗ ಮೂವರು ಸಾವು ಪ್ರಕರಣ ಸಂಬಂಧ ನಗರದ ಜಿಮ್ಸ್ ಆಸ್ಪತ್ರೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ, ಗಾಯಾಳುಗಳು ಹಾಗೂ ಕುಟುಂಬಸ್ಥರಿಂದ ಮಾಹಿತಿ (ಜನವರಿ -10-24) ಪಡೆದಿದ್ದರು.
ಇದನ್ನೂ ಓದಿ: ಸೂರಣಗಿ ಕಟೌಟ್ ದುರಂತ ಪ್ರಕರಣ: ಗಾಯಾಳುಗಳಿಂದ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು