ಗಜರಾಜನಿಗೂ ಇಷ್ಟ ಮಾವು: ಮರ ಹತ್ತಿ ಹಣ್ಣು ಕಿತ್ತು ತಿಂದ ಆನೆ- ವಿಡಿಯೋ - Elephant Ate Mango - ELEPHANT ATE MANGO
Published : Jun 1, 2024, 12:32 PM IST
ಚಾಮರಾಜನಗರ: ಮಾವಿನ ಸೀಸನ್ ಬಂತಂದ್ರೆ ಬಹುತೇಕರ ಬಾಯಲ್ಲಿ ನೀರೂರುವುದು ಸಾಮಾನ್ಯ. ಮಾವನ್ನು ಇಷ್ಟಪಟ್ಟು ಸವಿಯುವವರ ಸಂಖ್ಯೆ ದೊಡ್ಡದಿದೆ. ಆದರೆ, ಹಣ್ಣಿನ ರಾಜನನ್ನು ಕಂಡರೆ ನನಗೂ ಇಷ್ಟ ಎಂಬಂತೆ ಆನೆಯೊಂದು ಅರ್ಧ ಮರ ಹತ್ತಿ ಮಾವು ಕಿತ್ತು ಬಳಿಕ ಅದನ್ನು ಸವಿದಿರುವ ಘಟನೆ ಚಾಮರಾಜನಗರ ಗಡಿಭಾಗ ತಮಿಳುನಾಡಿನ ತಾಳವಾಡಿಯಲ್ಲಿ ಇಂದು ಮುಂಜಾನೆ ನಡೆದಿದೆ.
ನಟರಾಜು ಎಂಬುವವರ ತೋಟಕ್ಕೆ ಎಂಟ್ರಿ ಕೊಟ್ಟ ಆನೆಯೊಂದು ಎರಡು ಕಾಲನ್ನು ಮರದ ಮೇಲಿಟ್ಟು, ಸೋಂಡಿಲುನಿಂದ ಮಾವಿನ ಗೊಂಚಲನ್ನು ಕಿತ್ತು ಕೆಳಗಿಟ್ಟು ಒಂದಾದ ಮೇಲೆ ಒಂದರಂತೆ ಮಾವು ತಿಂದಿದೆ. ಆನೆ ಮಾವು ತಿನ್ನುವುದನ್ನು ಕಂಡು ಹೌಹಾರಿದ ಕುಟುಂಬ ಶಬ್ಧ ಮಾಡಿ ಆನೆಯನ್ನು ಓಡಿಸಿದ್ದಾರೆ. ಒಟ್ಟಿನಲ್ಲಿ ಮಾವಿನ ಆಸೆ ಗಜರಾಜನಿಗೂ ಬಂದಿದ್ದು, ಮರ ಹತ್ತಿ ಹಣ್ಣು ಕಿತ್ತು ತಿಂದ ದೃಶ್ಯ ಎಂಥವರನ್ನೂ ಗಮನ ಸೆಳೆಯುವಂತಿದೆ.
ಇದನ್ನೂ ಓದಿ: ಮತ ಎಣಿಕೆಗೆ ಸಕಲ ಸಿದ್ಧತೆ: ಮಾಹಿತಿ ಹಂಚಿಕೊಂಡ ರಾಯಚೂರು ಚುನಾವಣಾಧಿಕಾರಿ - Preparation for Election Counting
ಇದನ್ನೂ ಓದಿ: ಸತತ 6 ಗಂಟೆಗಳ ಕಾರ್ಯಾಚರಣೆ; ಬಾವಿಗೆ ಬಿದ್ದ ಮರಿ ಆನೆ ರಕ್ಷಿಸಿದ ಅರಣ್ಯ ಇಲಾಖೆ - ELEPHANT CUB RESCUED