ಕರ್ನಾಟಕ

karnataka

ETV Bharat / videos

LIVE; ಕೆಂಗೇರಿಯಲ್ಲಿ ಮಾರ್ಗದರ್ಶಿ ಚಿಟ್​ ಫಂಡ್​ನ 119ನೇ ಶಾಖೆ ಉದ್ಘಾಟನೆ - MARGADARSI NEW BRANCH

By ETV Bharat Karnataka Team

Published : Dec 11, 2024, 11:03 AM IST

Updated : Dec 11, 2024, 12:19 PM IST

ಬೆಂಗಳೂರು: ರಾಮೋಜಿ ಸಮೂಹ ಸಂಸ್ಥೆಗಳ ಕಂಪನಿಗಳಲ್ಲಿ ಒಂದಾದ ಮಾರ್ಗದರ್ಶಿ ಚಿಟ್​​ಫಂಡ್​ ಪ್ರೈವೇಟ್​ ಲಿಮಿಟೆಡ್​​ ಇಂದಿನಿಂದ ಮತ್ತೊಂದು ಶಾಖೆ ರಾಜ್ಯದಲ್ಲಿ ಕಾರ್ಯಾರಂಭಿಸಲಿದೆ. 119ನೇ ಶಾಖೆ ಬೆಂಗಳೂರಿನ ಕೆಂಗೇರಿಯಲ್ಲಿ ಲೋಕಾರ್ಪಣೆ ಆಗಿದೆ.   ಅತ್ಯಂತ ವಿಶ್ವಾಸಾರ್ಹ ಮತ್ತು ಗ್ರಾಹಕರ ಸ್ನೇಹಿಯಾಗಿರುವ ಮಾರ್ಗದರ್ಶಿ ಚಿಟ್​​ಫಂಡ್ ಸಂಸ್ಥೆಯು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ತನ್ನ ಹೂಡಿಕೆದಾರರು, ಗ್ರಾಹಕರ ಸಬಲೀಕರಣಕ್ಕೆ ಸಂಸ್ಥೆಯು ಕಠಿಬದ್ಧವಾಗಿದೆ.ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹೊಸ ಶಾಖೆಗಳನ್ನು ಪ್ರಾರಂಭಿಸುವ ಕುರಿತು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಗದರ್ಶಿ ಚಿಟ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, "ಸಂಸ್ಥೆಯು ಮತ್ತೆರಡು ಶಾಖೆಗಳನ್ನು ವಿಸ್ತರಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಗ್ರಾಹಕರ ಗುರಿಗಳನ್ನು ಸಾಕಾರ ಮಾಡಲು ಮಾರ್ಗದರ್ಶಿಯು ಬದ್ಧವಾಗಿದೆ. ಗ್ರಾಹಕರು ನಿರೀಕ್ಷಿಸಿದ ಮಟ್ಟದಲ್ಲಿ ಸೇವೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ" ಎಂದು ತಿಳಿಸಿದ್ದಾರೆ."ಸಂಸ್ಥೆಯು 1962ರಲ್ಲಿ ಪ್ರಾರಂಭವಾದಾಗಿನಿಂದಲೂ ನಂಬಿಕೆ ಮತ್ತು ವಿಶ್ವಾಸಾರ್ಹತೆ ಕಾಪಾಡಿಕೊಂಡು ಬಂದಿದೆ. 60 ಲಕ್ಷ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. 9,396 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಕಂಪನಿಯು ಮೌಲ್ಯಗಳ ಆಧಾರದ ಮೇಲೆ, ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ, ಗ್ರಾಹಕರ ಹಣಕ್ಕೆ ಭದ್ರತೆ ನೀಡುತ್ತದೆ" ಎಂದು ಶೈಲಜಾ ಸ್ಪಷ್ಟಪಡಿಸಿದರು.
Last Updated : Dec 11, 2024, 12:19 PM IST

ABOUT THE AUTHOR

...view details