ಕರ್ನಾಟಕ

karnataka

ETV Bharat / videos

ಸಂಸತ್ ಅಧಿವೇಶನ: ಲೋಕಸಭೆ ಕಲಾಪದ ನೇರಪ್ರಸಾರ - Parliament Session - PARLIAMENT SESSION

By ETV Bharat Karnataka Team

Published : Jul 1, 2024, 11:05 AM IST

Updated : Jul 1, 2024, 1:26 PM IST

ನವದೆಹಲಿ: ಸಂಸತ್‌ ಅಧಿವೇಶನ ಇಂದು ಪುನರಾರಂಭವಾಗಿದ್ದು, ಲೋಕಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ದೇಶದ ಆಡಳಿತ ವ್ಯವಸ್ಥೆಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಹಳೆಯ ಕಾನೂನುಗಳಾದ ಐಪಿಸಿ, ಸಿಆರ್‌ಪಿಸಿ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳಿಗೆ ಮಹತ್ತರ ಬದಲಾವಣೆ ಮಾಡಲಾಗಿದೆ. ಇವುಗಳನ್ನು ಭಾರತೀಯ ನ್ಯಾಯ ಸಂಹಿತಾ (ಬಿಎನ್‌‍ಎಸ್‌‍), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌‍ಎಸ್‌‍ಎಸ್‌‍), ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್‌‍ಎ) ಎಂದು ಪುನರ್‌ನಾಮಕರಣ ಮಾಡಿ ಪರಿಷ್ಕರಿಸಲಾಗಿದ್ದು, ಇಂದಿನಿಂದ (ಜುಲೈ 1ರಿಂದ) ಅಧಿಕೃತವಾಗಿ ಜಾರಿಗೆ ಬಂದಿವೆ. ಇನ್ನು, ಜೂನ್ 27ರಂದು ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಭಾಷಣ ಮಾಡಿದ್ದು, ವಂದನಾ ನಿರ್ಣಯದ ಮೇಲೆ ಸದಸ್ಯರು ಇತರೆ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ನೆಟ್‌, ನೀಟ್ ಪ್ರಶ್ನೆ ಪತ್ರಿಕೆ ಅಕ್ರಮಗಳು, ಹೊಸ ಕಾನೂನುಗಳ ಜಾರಿಯಂಥ ನಿರ್ಧಾರಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ವಾಕ್ಸಮರ ನಡೆಸುವ ಸಾಧ್ಯತೆ ಇದೆ. ಇದಕ್ಕೆ ಇತರೆ ಪ್ರತಿಪಕ್ಷಗಳೂ ಸಾಥ್‌ ನೀಡಲಿವೆ.ಈ ವಿಚಾರಗಳನ್ನು ಹೊರತುಪಡಿಸಿ ಸೇನೆಗೆ ಯುವಜನರ ನೇಮಕಾತಿಯ ಅಗ್ನಿಪಥ್ ಯೋಜನೆ, ಹಣದುಬ್ಬರ ಸಮಸ್ಯೆಗಳು ಹಾಗೂ ಯುವಜನರನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗಳ ಕುರಿತೂ ಪ್ರತಿಪಕ್ಷಗಳು ಸರ್ಕಾರದ ಗಮನಸೆಳೆಯಲಿವೆ.
Last Updated : Jul 1, 2024, 1:26 PM IST

ABOUT THE AUTHOR

...view details