ಕರ್ನಾಟಕ

karnataka

ETV Bharat / videos

ಹಾವೇರಿ: ಮಳೆರಾಯನ ಆರ್ಭಟಕ್ಕೆ 30ಕ್ಕೂ ಅಧಿಕ ಮನೆಗಳು ಜಲಾವೃತ

By ETV Bharat Karnataka Team

Published : Oct 22, 2024, 9:32 AM IST

Updated : Oct 22, 2024, 11:18 AM IST

ಹಾವೇರಿ : ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಸವಣೂರು ತಾಲೂಕಿನ ಬರದೂರು ಗ್ರಾಮ ಜಲಾವೃತವಾಗಿದೆ. ಗ್ರಾಮದ 30ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಇದರಿಂದಾಗಿ ಜನರು ಕಂಗಾಲಾಗಿದ್ದಾರೆ. 

ಬಾಜಿರಾಯನ ಹಳ್ಳದ ಆರ್ಭಟಕ್ಕೆ ಗ್ರಾಮದ ಜನರು ತತ್ತರಿಸಿ ಹೋಗಿದ್ದಾರೆ. 10ಕ್ಕೂ ಅಧಿಕ ಮನೆಗಳ ಗೋಡೆ ಕುಸಿದು, ಮನೆಗಳಿಗೆ ಹಾನಿಯಾಗಿದೆ. ಮನೆ ಕಳೆದುಕೊಂಡ ಗ್ರಾಮಸ್ಥರು ಕಣ್ಣೀರು ಹಾಕಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಹಾವೇರಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.  

ಒಂದು ವೇಳೆ ಪರಿಹಾರ ಕಲ್ಪಿಸದಿದ್ದರೆ ಶಿಗ್ಗಾಂವ್ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಇದು ಈ ವರ್ಷದ ಸಮಸ್ಯೆಯಲ್ಲ. 1992ರಲ್ಲಿ ಇದೇ ರೀತಿಯಾಗಿತ್ತು. 2019 ರಲ್ಲಿ 2021 ರಲ್ಲಿ ಸಹ ಇದೇ ರೀತಿಯಾಗಿತ್ತು. ನಮ್ಮ ಸಮಸ್ಯೆ ಇವರಿಗೆ ಅರ್ಥವಾಗುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯಾದಾಗಲೆಲ್ಲಾ ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಸಮಸ್ಯೆಯಲ್ಲಿ ಬದುಕುವವರು ನಾವು ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ :  ದಾವಣಗೆರೆಯಲ್ಲಿ ತಡರಾತ್ರಿ ಭಾರಿ ಮಳೆ: ಮನೆ, ರಸ್ತೆ, ತೋಟಗಳು ಜಲಾವೃತ

Last Updated : Oct 22, 2024, 11:18 AM IST

ABOUT THE AUTHOR

...view details