ಕರ್ನಾಟಕ

karnataka

ETV Bharat / videos

ಯೋಗ ಮಾಡಿ, ಆರೋಗ್ಯವಾಗಿರಿ: ಬಾಲಿವುಡ್​ ನಟ ಜಾಕಿ ಶ್ರಾಫ್ - Jackie Shroff - JACKIE SHROFF

By ETV Bharat Karnataka Team

Published : Jun 21, 2024, 4:01 PM IST

ಮುಂಬೈ(ಮಹಾರಾಷ್ಟ್ರ): ದೇಶಾದ್ಯಂತ ಇಂದು ವಿಶ್ವ ಯೋಗ ದಿನಾಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈ ಮಹಾನಗರ ಪಾಲಿಕೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫ್ಯಾಷನ್ ಡಿಸೈನರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಶೈನಾ ಎನ್.ಸಿ., ಹಿರಿಯ ನಟ ಜಾಕಿ ಶ್ರಾಫ್ ಯೋಗ ಮಾಡಿ ಗಮನ ಸೆಳೆದರು.   

ಮುಂಬೈನ ಮರೀನ್ ಡ್ರೈವ್​ನಲ್ಲಿ ಬೆಳಗ್ಗೆ 6:30ಕ್ಕೆ ಯೋಗ ಕಾರ್ಯಕ್ರಮ ಆರಂಭವಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಾಕಿ ಶ್ರಾಫ್, "ನನ್ನ ಮನೆ ಇಲ್ಲೇ ಸಮೀಪದಲ್ಲಿದೆ. ಬಾಲ್ಯವನ್ನು ಇದೇ ಪ್ರದೇಶದಲ್ಲಿ ಕಳೆದಿದ್ದೇನೆ. ನನ್ನ ಸಹೋದರ ಕೂಡ ಇದೇ ಪ್ರದೇಶದಲ್ಲಿ ನಿಧನರಾದರು. ಹಾಗಾಗಿ ನನಗೆ ಈ ಸ್ಥಳದೊಂದಿಗೆ ಭಾವನಾತ್ಮಕ ಸಂಬಂಧವಿದೆ" ಎಂದರು. 

ಮುಂದುವರೆದು, "ಶೈನಾ ಎನ್.ಸಿ. ಅವರ ತಂದೆ ರಾಜಕೀಯ ಪಕ್ಷ ಹೊಂದಿದ್ದರು. ಆ ಪಕ್ಷದ ಹೆಸರು 'ಸ್ವತಂತ್ರ' ಪಕ್ಷ ಎಂದಾಗಿತ್ತು. ನಾನು ಅದರ ಕಾರ್ಯಕರ್ತನಾಗಿದ್ದೆ. ಅವರ ಪಕ್ಷದ ಪೋಸ್ಟರ್‌ಗಳನ್ನು ಅಂಟಿಸಿ ಮನೆ ಮನೆಗೆ ಹಂಚುವ ಕೆಲಸ ಮಾಡಿದ್ದೇನೆ" ಎಂದರು.

"ಆ ಕಾಲದಲ್ಲಿ ಪೋಸ್ಟರ್ ಅಂಟಿಸಲು ಹಣ ಪಡೆಯುತ್ತಿದ್ದೆ. ಇದರೊಂದಿಗೆ ನನ್ನ ಬದುಕಿನ ಪಯಣ ಆರಂಭವಾಯಿತು. ರಾಜಕೀಯ ನಾಯಕರು ಈಗಲೂ ತಮ್ಮ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸುತ್ತಾರೆ. ಈ ಪ್ರದೇಶದ ಮಗ ಶೈನಾ ಎನ್‌.ಸಿ. ಅವರ ತಂದೆಯಿಂದ ನನಗೆ ನಿಮ್ಮ ಪ್ರೀತಿ ಸಿಕ್ಕಿತು" ಎಂದರು. 

ಇದೇ ವೇಳೆ, ಸಂಚಾರ ನಿಯಮಗಳನ್ನು ಪಾಲಿಸುವಂತೆಯೂ ತಿಳಿಸಿದರು. ಚಾಲಕರು ಹಾರ್ನ್ ಜೋರಾಗಿ ಬಾರಿಸುತ್ತಿದ್ದಾಗ, "ಯೋಗ ಮಾಡಿ, ಆರೋಗ್ಯವಾಗಿರಿ. ಸಂಚಾರಿ ನಿಯಮಗಳನ್ನು ಅನುಸರಿಸಿ. ಅನಗತ್ಯ ಹಾರ್ನ್ ಮಾಡಬೇಡಿ. ಶಾಂತವಾಗಿರಿ. ಸ್ವಚ್ಛತೆ ಕಾಪಾಡಿಕೊಳ್ಳಿ" ಎಂದು ಹೇಳಿದರು.

ಇದನ್ನೂ ಓದಿ: ನಟ ಸಾರ್ವಭೌಮ ಡಾ. ರಾಜ್​ಕುಮಾರ್ ಯೋಗ ಕಲಿಯಲು ಕಾರಣ ಏನೆಂಬುದು ನಿಮಗೆ ಗೊತ್ತೇ? - Rajkumar Yoga

ABOUT THE AUTHOR

...view details