ಮಸೀದಿ ಕಮಿಟಿಯಿಂದ ಗಣಪತಿಗೆ ಹಾರ: ಸೌಹರ್ದತೆಗೆ ಸಾಕ್ಷಿಯಾದ ಶಿವಮೊಗ್ಗ - Garland to Ganesha - GARLAND TO GANESHA
Published : Sep 13, 2024, 7:58 PM IST
ಶಿವಮೊಗ್ಗ: ಮಸೀದಿ ಕಮಿಟಿಯಿಂದ ಗಣಪತಿಗೆ ಹೂವಿನ ಹಾರ ಹಾಕುವ ಮೂಲಕ ಸೌಹಾರ್ದತೆ ಮೆರೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಸೀಗೆಹಟ್ಟಿಯ ಇಮಾನ್ ಬಾಡದಲ್ಲಿ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿ ವರ್ಷ ಗಣಪತಿ ನಿಮಜ್ಜನ ಮೆರವಣಿಗೆ ಹೋಗುವ ವೇಳೆ ಪೊಲೀಸರು ಅತ್ಯಂತ ಬಿಗಿ ಬಂದೋಬಸ್ತ್ ಒದಗಿಸಲಾಗುತ್ತದೆ. ಆದರೆ, ಈ ಬಾರಿ ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಇಮಾನ್ ಬಾಡದ ಮಸೀದಿ ಕಮಿಟಿ ಅವರು ಗಣಪತಿ ಹಾರ ಹಾಕುವ ಮೂಲಕ ಸೌರ್ಹದತೆ ಮೆರೆದಿದ್ದಾರೆ. ಗಣಪತಿಗೆ ಹಾರ ಹಾಕಿ ಮೆರವಣಿಗೆಯಲ್ಲಿ ಮಸೀದಿ ಕಮಿಟಿರವರು ಸ್ಥಳೀಯ ಮುಸ್ಲಿಂ ಯುವಕರು ಕುಣಿದು ಕುಪ್ಪಳಿಸಿದ್ದಾರೆ.
ಗಣಪತಿ ಮೆರವಣಿಗೆ ಬರುವಾಗ ಮಸೀದಿ ಕಮಿಟಿರವರೇ ಹಾರ ಹಾಕುವ ಮೂಲಕ ಪೊಲೀಸರಿಗೆ ಅಚ್ಚರಿ ಮೂಡಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಸೂಕ್ಷ್ಮ ಪ್ರದೇಶ ಎಂದೆನಿಸಿಕೊಂಡಿದ್ದ ಪ್ರದೇಶದಲ್ಲಿ ಗಣಪತಿ ಮೆರವಣಿಗೆ ಸರಾಗವಾಗಿ ಸಾಗಿದ್ದು, ಪೊಲೀಸರು ನಿಟ್ಟುಸಿರು ಬಿಡುವಂತೆ ಮಾಡಿದೆ. ಕಳೆದರಡು ದಿನಗಳ ಹಿಂದೆ ಕಳೆದ ಬಾರಿ ಗಲಾಟೆಯಾಗಿದ್ದ ರಾಗಿಗುಡ್ಡದಲ್ಲಿ ಗಣಪತಿ ಪೆಂಡಲ್ಗೆ ಹಿಂದು ಮುಸ್ಲಿಮರು ಒಟ್ಟಿಗೆ ತೆರಳಿ ಗಣಪತಿಗೆ ಪೂಜೆ ಸಲ್ಲಿಸಿದ್ದರು.
ಇದನ್ನೂ ನೋಡಿ: ಉಡುಪಿ ಕೃಷ್ಣ ಮಠದ ಗಣಪತಿ ನಿಮಜ್ಜನ; ಹುಲಿ ವೇಷಧಾರಿಗಳೊಂದಿಗೆ ಜನರ ಸಖತ್ ಸ್ಟೆಪ್ಸ್ - Udupi Ganapati Immersion