ಕರ್ನಾಟಕ

karnataka

ETV Bharat / videos

LIVE: ಲೋಕಸಭೆ ಕಲಾಪ; ಕೇಂದ್ರ ಬಜೆಟ್​ ವಿರೋಧಿಸಿ​ 'ಇಂಡಿಯಾ' ಪ್ರತಿಭಟನೆ - Lok Sabha Session

By ETV Bharat Karnataka Team

Published : Jul 24, 2024, 11:36 AM IST

Updated : Jul 24, 2024, 12:23 PM IST

ನವದೆಹಲಿ: ಲೋಕಸಭೆ ಕಲಾಪ ನಡೆಯುತ್ತಿದೆ. 2024ರ ಕೇಂದ್ರ ಬಜೆಟ್​ ವಿರೋಧಿಸಿ ಇಂಡಿಯಾ ಒಕ್ಕೂಟದ ನಾಯಕರು ಪ್ರತಿಭಟನೆ ನಡೆಸಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದು ಇಂಡಿಯಾ ಒಕ್ಕೂಟ ಆರೋಪಿಸಿತು. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜುಲೈ 27ರಂದು ನಡೆಯಲಿರುವ ನೀತಿ ಆಯೋಗದ ಸಭೆಯನ್ನು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಮುಖ್ಯಮಂತ್ರಿಗಳು ಬಹಿಷ್ಕರಿಸಿದ್ದಾರೆ. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಲವು ಸಂಸದರು ಮತ್ತು ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. 'ನಮಗೆ ಭಾರತ ಬಜೆಟ್ ಬೇಕು, ಎನ್‌ಡಿಎ ಬಜೆಟ್ ಅಲ್ಲ' ಮತ್ತು 'ಬಜೆಟ್‌ನಲ್ಲಿ ಭಾರತಕ್ಕೆ ಎನ್‌ಡಿಎ ದ್ರೋಹ ಬಗೆದಿದೆ' ಎಂಬ ಫಲಕಗಳನ್ನು ಹಿಡಿದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ ಎಂದು ಖರ್ಗೆ ಹೇಳಿದರು. ಬಜೆಟ್ ​ಅನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದು, ಸಂಸತ್​ ಅಧಿವೇಶನದ ನೇರಪ್ರಸಾರ ವೀಕ್ಷಿಸಿ.
Last Updated : Jul 24, 2024, 12:23 PM IST

ABOUT THE AUTHOR

...view details