ತುಮಕೂರು: ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆ ಓಡಾಟ-Watch video - LEOPARD AT SIDDAGANGAA MUTT
Published : Dec 9, 2024, 1:24 PM IST
ತುಮಕೂರು: ಸಿದ್ದಗಂಗಾ ಮಠದ ಆವರಣದಲ್ಲಿ ಚಿರತೆಯೊಂದು ರಾತ್ರಿ ಪ್ರತ್ಯಕ್ಷವಾಗಿದ್ದು, ಆತಂಕ ಮೂಡಿಸಿದೆ. ತುಮಕೂರಿನ ಕ್ಯಾತಸಂದ್ರದಲ್ಲಿ ಇರುವ ಸಿದ್ದಗಂಗಾ ಹಳೆಮಠದ ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಅಲ್ಲಿದ್ದ ನಾಯಿಗಳನ್ನು ಅಟ್ಟಾಡಿಸಿದೆ. ಚಿರತೆ ಮಠದ ಆವರಣದಲ್ಲಿ ಓಡಾಡುತ್ತಿರುವಂತಹ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಶನಿವಾರ ರಾತ್ರಿ 11.30 ಸಂದರ್ಭದಲ್ಲಿ ಕಾಣಿಸಿಕೊಂಡ ಚಿರತೆ, ನಾಯಿಯನ್ನು ಬೇಟೆಯಾಡಲು ಬಂದಿದೆ ಎಂದು ಶಂಕಿಸಲಾಗಿದೆ. ಚಿರತೆ ಪ್ರತ್ಯಕ್ಷದಿಂದ ಮಠದಲ್ಲಿನ ಮಕ್ಕಳ ಬಗ್ಗೆ ಚಿಂತೆಯಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿದೆ ಚಿರತೆ ಹವಾ: ಹೌದು, ಪ್ರತಿದಿನ ಚಿರತೆ ಪ್ರತ್ಯಕ್ಷ ಸುದ್ದಿಯಾಗುತ್ತಲೇ ಇದೆ. ಅರಣ್ಯ ನಾಶದ ಪರಿಣಾಮ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಹೀಗೆ ಮೊನ್ನೆ ಡಿಸೆಂಬರ್ 5ಕ್ಕೆ ಉಡುಪಿಯ ಎಲ್ಲೂರು ಮಾಣಿಯೂರು ಎಂಬಲ್ಲಿ ಚಿರತೆಯೊಂದು ಮನೆ ಅಂಗಳಕ್ಕೆ ನುಗ್ಗಿ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಹೊತ್ತೊಯ್ದಿತ್ತು.
ಇದನ್ನೂ ಓದಿ: ಉಡುಪಿ: ಮನೆ ಅಂಗಳಕ್ಕೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ - ಸಿಸಿಟಿವಿ ವಿಡಿಯೋ
ಇದನ್ನೂ ಓದಿ: ನೆಲಮಂಗಲ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮಹಿಳೆ ಕೊಂದ ಚಿರತೆ ಸೆರೆ