ಕರ್ನಾಟಕ

karnataka

ETV Bharat / videos

ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ- ನೋಡಿ - KARTHIKA DEEPOTSAVA

By ETV Bharat Karnataka Team

Published : Nov 26, 2024, 10:11 AM IST

ವಿಜಯನಗರ: ಕಾರ್ತಿಕ ಸೋಮವಾರದ ರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದಕ್ಷಿಣ ಕಾಶಿ ಹಂಪಿಯಲ್ಲಿ ಸಡಗರದಿಂದ ದೀಪೋತ್ಸವ ನಡೆಯಿತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ಇತರ ರಾಜ್ಯಗಳ ಸಾವಿರಾರು ಭಕ್ತರು ಆಗಮಿಸಿ ದೀಪ ಹಚ್ಚಿ ಕಾರ್ತಿಕ ಸೋಮವಾರದ ವ್ರತ ಆಚರಿಸಿದರು. ದೇವಸ್ಥಾನದ ಮುಂಭಾಗದಲ್ಲಿ ಭಕ್ತರು ರಂಗೋಲಿ ಹಾಕಿ, ತುಪ್ಪದ ದೀಪ, ಎಣ್ಣೆ ದೀಪ ಹಚ್ಚಿ ಶ್ರದ್ಧೆಯಿಂದ ಭಕ್ತಿ ಸಮರ್ಪಣೆ ಮಾಡಿದರು.

ಹಂಪಿಯ ಪ್ರಸಿದ್ಧ ಶ್ರೀ ವಿರೂಪಾಕ್ಷ ದೇಗುಲದ ಆವರಣದಲ್ಲಿ ನಡೆದ ದೀಪೋತ್ಸವದಲ್ಲಿ ವಿಜಯನಗರ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು. ವಿಶ್ವ ಪರಂಪರೆಯ ತಾಣ ಹಂಪಿಯನ್ನು ನೋಡಲು ಆಗಮಿಸಿದ ವಿದೇಶಿ ಪ್ರವಾಸಿಗರು ಕೂಡಾ ಕಾರ್ತಿಕ ದೀಪೋತ್ಸವವನ್ನು ಕಣ್ತುಂಬಿಕೊಂಡರು. ಮಾತ್ರವಲ್ಲದೇ, ತಾವೂ ಕೂಡಾ ದೀಪ ಹಚ್ಚುವ ಮೂಲಕ ಭಾರತೀಯ ಹಬ್ಬದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದು ಕಂಡುಬಂತು.

ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ ವೈಭವ: ಏಕಕಾಲದಲ್ಲಿ ಬೆಳಗಿದ 25 ಲಕ್ಷ ಹಣತೆ! 2 ಗಿನ್ನೆಸ್ ವಿಶ್ವದಾಖಲೆ

ABOUT THE AUTHOR

...view details