ನಂದಿಯಂತಿರುವ ಬೈಕ್‌ನಲ್ಲಿ ಶಿವಭಕ್ತ: ವಿಡಿಯೋ ವೈರಲ್ - shivaratri 2024
Published : Mar 9, 2024, 11:57 AM IST
ಹರಿದ್ವಾರ (ಉತ್ತರಾಖಂಡ): ಶಿವನ ವೇಷ ಧರಿಸಿರುವ 'ಕನ್ವರಿಯಾ'ನ (ಶಿವಭಕ್ತ) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ. ನಂದಿ ಶೈಲಿಯಲ್ಲಿರುವ ಬೈಕ್ ಅನ್ನು ಶಿವವೇಷಧಾರಿ ಓಡಿಸುತ್ತಿರುವುದನ್ನು ಕಾಣಬಹುದು. ನೋಡುಗರು ಕುತೂಹಲದಿಂದ ಈ ದೃಶ್ಯ ವೀಕ್ಷಿಸಿದ್ದು, ಶಿವಭಕ್ತ ತನ್ನ ನಂದಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ.
ರಿಂಕು ಪ್ರಜಾಪತಿ ಎಂದು ಗುರುತಿಸಲಾಗಿರುವ ವ್ಯಕ್ತಿ 'ಹರ್ ಕಿ ಪೌರಿ'ಯಿಂದ ಗಂಗಾಜಲ ಸಂಗ್ರಹಿಸಲು ಆಗಮಿಸಿದ್ದರು. ತಮ್ಮ ಬೈಕ್ ಅನ್ನು ನಂದಿಯಂತೆ ಪರಿವರ್ತಿಸಲು ಒಂದು ತಿಂಗಳು ಸಮಯ ಹಿಡಿಯಿತು ಎಂದು ರಿಂಕು ಪ್ರಜಾಪತಿ ತಿಳಿಸಿದರು. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಹರಿದ್ವಾರ ಟ್ರಾಫಿಕ್ ಪೊಲೀಸ್, 'ಇದು ನಂಬಿಕೆಯ ವಿಷಯ'. ಜೊತೆಗೆ, ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವರಾತ್ರಿ ಆಚರಣೆಗೂ ಮೊದಲು ತಿಳಿಸಿದ್ದರು. ದೇಶಾದ್ಯಂತ ಶುಕ್ರವಾರ ಶಿವರಾತ್ರಿ ಹಬ್ಬ ಆಚರಿಸಿದ್ದು, ಶಿವ ಭಕ್ತನ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಮಹಾಶಿವರಾತ್ರಿ: ನಂಜುಂಡೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಜಾಗರಣೆ