ಇಸ್ರೋದಿಂದ ಪ್ರೊಬಾ -3 ಮಿಷನ್ ಉಡಾವಣೆ - ಬಾಹ್ಯಾಕಾಶ ಕೇಂದ್ರದಿಂದ ನೇರ ಪ್ರಸಾರ - PROBA 3 MISSION
Published : Dec 5, 2024, 4:05 PM IST
|Updated : Dec 5, 2024, 4:33 PM IST
ಯುರೋಪಿಯನ್ ಸ್ಪೇಸ್ ಏಜೆನ್ಸಿಯ (ಇಎಸ್ಎ) ಪ್ರೊಬಾ -3 ಮಿಷನ್ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯು (ಇಸ್ರೋ) ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ-ಎಕ್ಸ್ಎಲ್) ಮೂಲಕ ಉಡಾವಣೆ ಮಾಡಿತು. ಪಿಎಸ್ಎಲ್ವಿ ನೌಕೆಯಲ್ಲಿ ಎರಡು ಉಪಗ್ರಹಗಳು ನಭೆಕ್ಕೆ ಚಿಮ್ಮಿದ್ದು, ಹತ್ತಿರದಿಂದಲೇ ಸೂರ್ಯನ ಹೊರ ಮೇಲ್ಮೈಯನ್ನು ಅಧ್ಯಯನ ನಡೆಸಲಿವೆ. ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ಬಾಹ್ಯಾಕಾಶ ನೌಕೆಗಳೆರಡರ ನಿಖರ ರಚನೆಯ ಹಾರಾಟವನ್ನು ಪ್ರದರ್ಶಿಸುವುದು ಈ ಬಾಹ್ಯಾಕಾಶ ಕಾರ್ಯಾಚರಣೆಯ ಉದ್ದೇಶವಾಗಿದೆ. ಉಡಾವಣೆಗೊಂಡ ಉಪಗ್ರಹವು ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಇರುವಂತೆ ಮಾಡಲು ನಿಖರವಾದ ನಿಯಂತ್ರಣ ತಂತ್ರಗಳು ಮತ್ತು ಅಳತೆಗಳನ್ನು ಬಳಸಲಾಗುತ್ತದೆ.ಕೊರೊನೊಗ್ರಾಫ್ ಮತ್ತು ಅಕ್ಯುಲ್ಟರ್ ನಿಖರ ರಚನೆ ಹಾರಾಟ ನಡೆಸಲಿವೆ. ಇದು ವಿಶ್ವದ ಮೊದಲ 'ನಿಖರ ರಚನೆ ಹಾರಾಟ' ಉಪಗ್ರಹವಾಗಲಿದೆ. ನೌಕೆಯ ಉಡಾವಣೆಯನ್ನು ಇಸ್ರೋ ನೆರೆವೇರಿಸಿದರೆ, ಅದರ ನಿರ್ವಹಣೆಯನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ಮಾಡಲಿದೆ. ವಾಣಿಜ್ಯ ಉದ್ದೇಶಕ್ಕೆ ಇಸ್ರೋ ಆರಂಭಿಸಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಮೂಲಕ ಉಡಾವಣೆ ಮಾಡುತ್ತಿರುವ ಮೊದಲ ಯೋಜನೆ ಇದಾಗಿದೆ.ನಿಗದಿಯಂತೆ ಬುಧವಾರ ಈ ನೌಕೆ ಉಡಾವಣೆ ಆಗಬೇಕಿತ್ತು. ಆದರೆ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ ಮಿಷನ್ ಇಂದು 4.12ಕ್ಕೆ ಮುಂದೂಡಲಾಗಿತ್ತು. ಅದರಂತೆ ಇದೀಗ ಉಡಾವಣೆ ಮಾಡಲಾಗಿದ್ದು, ನೇರ ಪ್ರಸಾರ ಇಲ್ಲಿದೆ.
Last Updated : Dec 5, 2024, 4:33 PM IST