ಕರ್ನಾಟಕ

karnataka

ETV Bharat / videos

ಕೊಪ್ಪಳದ ಗವಿಮಠದಲ್ಲಿ ಸಂಭ್ರಮದಿಂದ ಜರುಗಿದ ತೆಪ್ಪೋತ್ಸವ, ಗಂಗಾರತಿ: ವಿಡಿಯೋ - ತೆಪ್ಪೋತ್ಸವ

By ETV Bharat Karnataka Team

Published : Jan 24, 2024, 10:58 PM IST

ಕೊಪ್ಪಳ: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಬುಧವಾರ ಸಂಜೆ ಗವಿಮಠದ ಕೆರೆಯಲ್ಲಿ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ತೆಪ್ಪೋತ್ಸವ ಸಂಭ್ರಮ, ಸಡಗರದಿಂದ ನೆರವೇರಿತು. ವಿದ್ಯುತ್ ದೀಪಗಳಲ್ಲಿ ಅಲಂಕಾರಗೊಂಡ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ತೆಪ್ಪೋತ್ಸವಕ್ಕೆ ಡಯಟ್‍ನ ನಿವೃತ್ತ ಪ್ರಾಧ್ಯಾಪಕ ಪಂಚಾಕ್ಷರಯ್ಯ ನೂರಂದಯ್ಯನಮಠ ಚಾಲನೆ ನೀಡಿದರು. ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಜಯ ಗವಿಸಿದ್ದೇಶ ಎಂಬ ಘೋಷಣೆ ಕೂಗಿ ಭಕ್ತಿ ಮೆರೆದರು.‌ ತೆಪ್ಪೋತ್ಸವದ ಬಳಿಕ ನಡೆದ ಗಂಗಾರತಿ ಕಣ್ಮನ ಸೆಳೆಯಿತು. ತೆಪ್ಪೋತ್ಸವ ಹಾಗೂ ಗಂಗಾರತಿಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

ತೆಪ್ಪೋತ್ಸವಕ್ಕೆ ಆಗಮಿಸಿದ್ದ ಭಕ್ತೆ ಮಧು ಮಾತನಾಡಿ, ತೆಪ್ಪೋತ್ಸವ ನೋಡುವುದಕ್ಕೆ ಅದ್ಭುತ ಎನ್ನಿಸುತ್ತದೆ. ತೆಪ್ಪೋತ್ಸವ ನೋಡುವುದೇ ನಮ್ಮ ಪುಣ್ಯ, ನಾನು ಸತತವಾಗಿ ಮೂರು ವರ್ಷಗಳಿಂದ ತೆಪ್ಪೋತ್ಸವನ್ನು ನೋಡುತ್ತಿದ್ದೇನೆ. ಇಲ್ಲಿ ತೆಪ್ಪೋತ್ಸವವನ್ನು ವೈಭವದಿಂದ ಮಾಡಿಕೊಂಡು ಬರಲಾಗುತ್ತಿದೆ. ದಕ್ಷಿಣ ಭಾರತದ ಕುಂಭಮೇಳ ಎಂದೇ ಇದು ಹೆಸರುವಾಸಿಯಾಗಿದೆ ಎಂದು ಹೇಳಿದರು.

ತೆಪ್ಪೋತ್ಸವಕ್ಕೆ ಆಗಮಿಸಿದ್ದ ಭಕ್ತೆ ಅಮೃತ ಹಿರೇಮಠ ಮಾತನಾಡಿ, ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೂ ಮೂರು ದಿನ ಮುಂಚೆ ತೆಪ್ಪೋತ್ಸವ ನಡೆಯುತ್ತದೆ. ತೆಪ್ಪೋತ್ಸವವನ್ನು ಸಂಭ್ರಮದಿಂದ ನಡೆಸಿಕೊಂಡು ಬರಲಾಗುತ್ತಿದೆ. ಗಂಗಾರತಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಮಾಡುವುದಿಲ್ಲ, ಉತ್ತರ ಭಾರತದಲ್ಲಿ ಮಾಡುತ್ತಾರೆ. ಆದರೆ, ಇಲ್ಲಿ ಗಂಗಾರತಿಯನ್ನು ಮಾಡಲಾಗುತ್ತಿರುವುದು ವಿಶೇಷ ಎಂದರು. 

ಇದನ್ನೂ ಓದಿ: ಕೊಪ್ಪಳದ ಯುವತಿ ದೆಹಲಿ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿ

ABOUT THE AUTHOR

...view details