ದತ್ತಪೀಠ ಪ್ರದೇಶದಲ್ಲಿ ಭಾರೀ ಬೆಂಕಿ, ಹುಲ್ಲುಗಾವಲು ನಾಶ: ವಿಡಿಯೋ - Dattapeeta Fire
Published : Mar 26, 2024, 8:55 AM IST
ಚಿಕ್ಕಮಗಳೂರು: ಬಿಸಿಲ ಬೇಗೆಗೆ ದತ್ತಪೀಠದ ಸುತ್ತಮುತ್ತ ಹಾಗು ಚಂದ್ರದ್ರೋಣ ಪರ್ವತಶ್ರೇಣಿ ಸಂಪೂರ್ಣ ಒಣಗಿದ್ದು, ಸೋಮವಾರ ಬೆಂಕಿ ಕಾಣಿಸಿಕೊಂಡಿತು. ದತ್ತಪೀಠದಲ್ಲಿ ಉರುಸ್ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಯಿಂದ ಜನರು ಬಂದಿದ್ದು, ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಟೆಂಟ್ ಹಾಕಿ ಅಡುಗೆ ಮಾಡುತ್ತಿದ್ದಾರೆ. ಅಡುಗೆ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿಯ ಕಿಡಿ ಹುಲ್ಲಿಗೆ ತಗುಲಿದೆ ಎನ್ನಲಾಗಿದ್ದು, ಎಕರೆಗಟ್ಟಲೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಸೇರಿದಂತೆ ಅರಣ್ಯ ಇಲಾಖೆ ಬೆಂಕಿ ನಿಯಂತ್ರಿಸುವ ಕೆಲಸ ಮಾಡಿದೆ.
ಬಿಸಿಲಿಗೆ ಒಣಗಿ ಕಾದ ಕಾವಲಿಯಂತಾಗಿದ್ದ ಈ ಪ್ರದೇಶದಲ್ಲಿ ಬೆಂಕಿ ಬಿದ್ದಿರುವುದರಿಂದ ಹುಲ್ಲುಗಾವಲು, ಅಪರೂಪದ ಜೀವರಾಶಿ ಹಾಗೂ ಗಿಡ ಮೂಲಿಕೆಗಳು ಸೇರಿದಂತೆ ಔಷಧಿ ಸಸ್ಯಗಳು ಸುಟ್ಟು ಹೋಗಿವೆ. ಟೆಂಟ್ ಹಾಕಿ ಅಡುಗೆ ಮಾಡಿ ಅನಾಹುತಕ್ಕೆ ಕಾರಣರಾದ ಜನರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ಕಾರುಗಳು ಸಂಪೂರ್ಣ ಭಸ್ಮ - cars burnt in Chikkamagaluru