ಕರ್ನಾಟಕ

karnataka

ETV Bharat / videos

ಸರ್ಕಾರಿ ಬಸ್​ನಲ್ಲಿ ಏಕಾಏಕಿ ಬೆಂಕಿ: ಡ್ರೈವರ್‌ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು - FIRE BREAKS OUT IN KSRTC BUS

By ETV Bharat Karnataka Team

Published : Dec 3, 2024, 1:28 PM IST

ಮೈಸೂರು: ಚಲಿಸುತ್ತಿದ್ದ ಸರ್ಕಾರಿ ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಹೆಚ್. ಡಿ. ಕೋಟೆ ತಾಲ್ಲೂಕಿನ, ಹ್ಯಾಂಡ್‌ ಪೋಸ್ಟ್‌ ಬಳಿಯ ಜಕ್ಕನಹಳ್ಳಿ ಬಳಿ ನಡದಿದೆ. 

ಹೆಚ್. ಡಿ. ಕೋಟೆ ಸಾರಿಗೆ ಘಟಕ್ಕೆ ಸೇರಿದ ಕೆಎಸ್​ಆರ್​ಟಿಸಿ ಬಸ್‌, ಹ್ಯಾಂಡ್‌ ಪೋಸ್ಟ್​ನಿಂದ ಜಕ್ಕನಹಳ್ಳಿ ಬಳಿ ಬರುವಾಗ ಬಸ್​ನ ಬಾನೆಟ್‌ ಬಳಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬಸ್​ ಚಾಲಕ ಹನುಮಂತಪ್ಪ, 15-16 ಪ್ರಯಾಣಿಕರನ್ನು ಬಸ್​ನಿಂದ ಕೆಳಗೆ ಇಳಿಸಿ, ಅಗ್ನಿಶಾಮಕ ದಳಕ್ಕೆ ಫೋನ್‌ ಮಾಡಿದ್ದಾರೆ. ಬಾನೆಟ್​ನ ಹಿಂಭಾಗದಲ್ಲಿ ಡೀಸೆಲ್‌ ಟ್ಯಾಂಕ್‌ ಬಳಿ ಹೊಗೆ ಬಂದಿದ್ದು, ತಕ್ಷಣ ಅಗ್ನಿ ಶಾಮಕ ದಳವರು ಸಾರ್ವಜನಿಕರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.

ಗ್ರಾಮಾಂತರ ಪ್ರದೇಶಕ್ಕೆ ಸರಿಯಾಗಿ ನಿರ್ವಹಣೆಯಿಲ್ಲದ ಬಸ್​ಗಳನ್ನು ಕಳುಹಿಸಲಾಗುತ್ತದೆ. ಇದರಿಂದ ಈ ರೀತಿ ಅವಘಡಗಳು ಸಂಭಸುತ್ತಿವೆ. ಸಾರಿಗೆ ಇಲಾಖೆಯವರು ಗ್ರಾಮಾಂತರ ಪ್ರದೇಶಕ್ಕೆ ಉತ್ತಮ ಸ್ಥಿತಿಯಲ್ಲಿರುವ ಬಸ್​ಗಳನ್ನು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸಬರಮತಿ - ದೌಲತ್‌ಪುರ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ; ತಪ್ಪಿದ ಭಾರಿ ದುರಂತ

ABOUT THE AUTHOR

...view details