ಕರ್ನಾಟಕ

karnataka

ETV Bharat / videos

ಸರ್ಕಾರಿ ಶಾಲೆ ಆವರಣದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ - King Cobra Rescued - KING COBRA RESCUED

By ETV Bharat Karnataka Team

Published : Sep 25, 2024, 10:13 AM IST

ಚಿಕ್ಕಮಗಳೂರು: ಸರ್ಕಾರಿ ಶಾಲೆಯ ಆವರಣದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಸರ್ಕಾರಿ ಶಾಲೆಯ ಆವರಣದಲ್ಲಿ ಕಾಳಿಂಗ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಉರಗ ತಜ್ಞ ಆರಿಫ್ ಅವರಿ​ಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದರು. 

ಆರಿಫ್​ ನೇತೃತ್ವದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಹಾವು ಸೆರೆ ಹಿಡಿಯಲಾಯಿತು. ಇದನ್ನು ನೋಡಲು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಬೃಹತ್ ಹಾವು ಕಂಡು ಅರೆಕ್ಷಣ ಬೆಚ್ಚಿ ಬಿದ್ದಿದ್ದಾರೆ. 

ಕಾರ್ಯಾಚರಣೆಯ ವೇಳೆ ಅರಣ್ಯ ಸಿಬ್ಬಂದಿ ಕೂಡ ಭಾಗಿಯಾಗಿದ್ದರು. ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶಕ್ಕೆ ಸುರಕ್ಷತವಾಗಿ ಬಿಡಲಾಗಿದೆ.

ಇದೇ ತಿಂಗಳಿನಲ್ಲಿ ಮೂರರಿಂದ ನಾಲ್ಕು ಹಾವು ಪತ್ತೆ ಪ್ರಕರಣಗಳು ಕಂಡುಬಂದಿದ್ದು, ಕಾಳಿಂಗ ಸರ್ಪಗಳು ಮಲೆನಾಡು ಭಾಗದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. 

ಇದನ್ನೂ ಓದಿ: ದಾವಣಗೆರೆ : ಕಾಲೇಜಿನ ಅಡುಗೆಮನೆಗೆ ನುಗ್ಗಿ ಪಾತ್ರೆಯಲ್ಲಿ ಅವಿತಿದ್ದ ನಾಗರಹಾವು! - Cobras Rescued

ABOUT THE AUTHOR

...view details