ಧುಮ್ಮಿಕ್ಕಿ ಹರಿಯುತ್ತಿದೆ ವಿಶ್ವಪ್ರಸಿದ್ಧ ಧೂದ್ ಸಾಗರ್ ಜಲಪಾತ: ಡ್ರೋಣ್ ಕ್ಯಾಮರಾದಲ್ಲಿ ಅದ್ಭುತ ದೃಶ್ಯ ಸೆರೆ - Dudhsagar Waterfall - DUDHSAGAR WATERFALL
Published : Jul 23, 2024, 4:56 PM IST
ಬೆಳಗಾವಿ: ವಿಶ್ವಪ್ರಸಿದ್ಧ ಧೂದ್ ಸಾಗರ್ ಜಲಪಾತದ ಅದ್ಭುತ ಪ್ರಕೃತಿ ಸೌಂದರ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಲಪಾತದ ರಮಣೀಯ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಹೌದು, ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಬರುವ ಈ ಜಲಪಾತವು ಮಳೆಗಾಲ ಆರಂಭವಾಗುತ್ತಿದ್ದಂತೆ, ದಟ್ಟ ಅರಣ್ಯ ಪ್ರದೇಶದಲ್ಲಿ ಹಾಲ್ನೋರೆಯಂತೆ ಹರಿಯುತ್ತದೆ. ಧುಮ್ಮಿಕ್ಕುತ್ತಿರುವ ಈ ಜಲಪಾತದ ದೃಶ್ಯ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ. ಹೆಸರಿಗೆ ತಕ್ಕಹಾಗೆ ಹಾಲಿನ ನೊರೆಯಂತೆ ಕಂಗೊಳಿಸುತ್ತಿರುವ ಈ ಕ್ಷಣ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.
ಮಹದಾಯಿ ನದಿಯಿಂದ ಉದ್ಭವಿಸುವ ಧೂದ್ ಸಾಗರದಲ್ಲಿ ಮಂಜಿನಾಟದ ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಬೆಳಗಾವಿಯಿಂದ 80 ಕಿ.ಮೀ ದೂರದಲ್ಲಿರುವ ಧೂದ್ ಸಾಗರ್ ಜಲಪಾತವೂ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿಯನ್ನೂ ಧೂದ್ ಸಾಗರ್ ಜಲಪಾತ ರೂಪಿಸಲಿದ್ದು, ಭೂಲೋಕದ ಸ್ವರ್ಗಕ್ಕೆ ಇನ್ನೊಂದು ಹೆಸರೇ ಧೂದ್ ಸಾಗರ್ ಜಲಪಾತ ಎಂದೇ ಪ್ರಖ್ಯಾತಿ ಪಡೆದಿದೆ. ದಟ್ಟ ಕಾಡಿನಿಂದ ಸುತ್ತುವರಿದಿರುವ ಧೂದ್ ಸಾಗರ ಜಲಪಾತದ ರುದ್ರ ರಮಣೀಯ ದೃಶ್ಯ ಸದ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಕಾಫಿನಾಡಲ್ಲಿ ಮಳೆ ಅಬ್ಬರ: ರಸ್ತೆ ಕುಸಿದು ಪ್ರಪಾತಕ್ಕೆ ಬಿದ್ದ ಲಾರಿ; ನೀರಿನಲ್ಲಿ ಕೊಚ್ಚಿಹೋದ ಕೋಣ - LORRY FALLS INTO ABYSS