VIDEO: 'ಹೆದರಬೇಡ ಪಾಂಚಾಲಿ..' ಗದೆ ಹಿಡಿದು ಅಬ್ಬರಿಸಿದ ಶಾಸಕ ಶಿವಲಿಂಗೇಗೌಡ - MLA KM Shivalige gowda
Published : Mar 11, 2024, 8:53 AM IST
ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದಲ್ಲಿ ನಡೆದ ಪೌರಾಣಿಕ ನಾಟಕ ಪ್ರದರ್ಶನದ ವೇಳೆ 'ಹೆದರಬೇಡ ಪಾಂಚಾಲಿ..' ಭರ್ಜರಿ ಡೈಲಾಗ್ ಮೂಲಕ ಶಾಸಕ ಕೆ.ಎಂ. ಶಿವಲಿಂಗೇಗೌಡ ನೋಡುಗರ ಗಮನ ಸೆಳೆದರು. ನಾಟಕದ ಆರಂಭಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ ಗದೆ ಹಿಡಿದು ಹೇಳಿದ ಸಂಭಾಷಣೆಯ ವಿಡಿಯೋ ತುಣುಕು ಸಾಕಷ್ಟು ವೈರಲ್ ಆಗಿದೆ.
''ಹೆದರಬೇಡ ಪಾಂಚಾಲಿ, ನೀನೇಕೆ ಹೆದರುವೆ. ನಿನ್ನ ಮುಡಿಯನ್ನ ಎಳೆದು ವಸ್ತ್ರವನ್ನ ಎಳೆಯಲು ಮುಂದಾದವರ ಎದೆ ಬಗೆದು ರಕ್ತದಲ್ಲಿ ನಿನ್ನ ಮುಡಿಗರ್ಪಿಸುವೆ'' ಎಂಬ ಕುರುಕ್ಷೇತ್ರದ ಭೀಮನ ಪಾತ್ರದ ಹಳೆಗನ್ನಡ ಡೈಲಾಗ್ಗೆ ಪ್ರೇಕ್ಷಕರಿಂದ ಚಪ್ಪಾಳೆ ಸದ್ದು ಮೊಳಗಿತು.
ಗಂಡಸಿ ಗ್ರಾಮದಲ್ಲಿನ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಕೂಡ ಆಗಮಿಸಿದ್ದರು. ಈಗಾಗಲೇ ಕ್ಷೇತ್ರದ ಜನರ ಭೇಟಿಯಲ್ಲಿ ನಿರತರಾಗಿರುವ ಶ್ರೇಯಸ್ ಪಟೇಲ್, ಇದಕ್ಕೂ ಮುನ್ನ ಶಾಸಕ ಶಿವಲಿಂಗೇಗೌಡರ ನಿವಾಸ ಹಾಗೂ ಇತರ ಕಾಂಗ್ರೆಸ್ ಮುಖಂಡರ ಮನೆಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಸಮುದ್ರಕ್ಕೆ ಧುಮುಕಿ ಶವಾಸನ ಮಾಡಿದ ಸಚಿವ ಮಂಕಾಳ ವೈದ್ಯ: ವಿಡಿಯೋ ನೋಡಿ