ಕರ್ನಾಟಕ

karnataka

ETV Bharat / videos

ದಾವಣಗೆರೆ ಕಾಂಗ್ರೆಸ್​ ಅಭ್ಯರ್ಥಿ ಪ್ರಚಾರ; ಪತಿಗೆ ಪ್ರೀತಿಯಿಂದ ಬೆಣ್ಣೆದೋಸೆಯ ತುತ್ತು ತಿನ್ನಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್‌ - DR PRABHA MALLIKARJUN - DR PRABHA MALLIKARJUN

By ETV Bharat Karnataka Team

Published : Apr 18, 2024, 3:58 PM IST

ದಾವಣಗೆರೆ: ದಾವಣಗೆರೆ ಲೋಕಸಭಾ ಚುನಾವಣೆಯ ಕಣ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರ ಚುನಾವಣಾ ಪ್ರಚಾರ ಕ್ಷೇತ್ರದಲ್ಲಿ ಜೋರಾಗಿದೆ. ಇದೀಗ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರ ಪತಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ಕೂಡ ಪತ್ನಿಗೆ ಪ್ರಚಾರಕ್ಕೆ ಸಾಥ್ ಕೊಡ್ತಿದ್ದಾರೆ. ಪ್ರಚಾರದ ವೇಳೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ ದಂಪತಿ ಒಂದೇ ತಟ್ಟೆಯಲ್ಲಿ ಬೆಣ್ಣೆದೋಸೆ ಸವಿದ್ರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು ತಮ್ಮ ಪತಿ, ಸಚಿವ ಎಸ್​ಎಸ್ ಮಲ್ಲಿಕಾರ್ಜುನ್‌ ಅವರಿಗೆ ಪ್ರೀತಿಯ ತುತ್ತು ತಿನ್ನಿಸಿದ್ರು. ಇನ್ನು ಮಲ್ಲಿಕಾರ್ಜುನ್ ಅವರು ಕೂಡ ತಮ್ಮ ಪತ್ನಿ ಡಾ. ಪ್ರಭಾ ಅವರಿಗೆ ದೋಸೆ ತಿನ್ನಿಸಿದ್ರು. ನಾಮಪತ್ರ ಸಲ್ಲಿಸುವ ಮುನ್ನ ಮತಯಾಚನೆ ಮಾಡುವ ವೇಳೆ ಸತಿಪತಿ ಇಬ್ಬರು ದೋಸೆ ಸವಿದಿದ್ದು ಗಮನ ಸೆಳೆಯಿತು. ಈ ವೇಳೆ ಮತದಾರರು ಕೂಡ ಈ ದೃಶ್ಯವನ್ನು ಕಂಡು ಕೇಕೆ, ಶಿಳ್ಳೆ ಹಾಕಿದರು. ಇಂದು ನಾಮಪತ್ರ ಸಲ್ಲಿಸುವ ಮುನ್ನ ದಾವಣಗೆರೆ ನಗರದ ನಿಟ್ಟುವಳ್ಳಿ ಬಳಿಯಿರುವ ಹೋಟೆಲ್ ನಲ್ಲಿ ದೋಸೆ ಆರ್ಡರ್ ಮಾಡಿ ಇಬ್ಬರು ದೋಸೆ ಸವಿದರು. ಈ ವೇಳೆ ಶಾಸಕರಾದ ಶಿವಗಂಗಾ ಬಸವರಾಜ್, ಡಿ.ಜಿ ಶಾಂತನಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು‌. ದಾರಿಯುದ್ದಕ್ಕೂ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಪರ ಜಯಕಾರ ಘೋಷಣೆಗಳು ಕೇಳಿಬಂದವು. 

ಇದನ್ನೂ ಓದಿ: ಧಾರವಾಡದಲ್ಲಿ ಸದ್ದು ಮಾಡಿದ ರೈತನ ಬಾರುಕೋಲು; ಬರಿಗಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅನ್ನದಾತ - A FARMER FILES NOMINATION

ABOUT THE AUTHOR

...view details