ದಾವಣಗೆರೆ: ಗಾಳಿ-ಮಳೆಗೆ ಬಾಳೆ, ಪಪ್ಪಾಯಿ ಗಿಡಗಳು ನಾಶ; ಧರೆಗುರುಳಿದ ಅಡಿಕೆ ಮರಗಳು - Crop Destroy - CROP DESTROY
Published : Apr 20, 2024, 3:47 PM IST
ದಾವಣಗೆರೆ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಶುಕ್ರವಾರ ರಾತ್ರಿ ಗಾಳಿ - ಮಳೆಯಿಂದಾಗಿ ಹೊನ್ನಾಳಿ ತಾಲೂಕಿನ ತರಗನಹಳ್ಳಿಯಲ್ಲಿ ಅಡಿಕೆ, ಬಾಳೆ ಹಾಗೂ ಪಪ್ಪಾಯಿ ಗಿಡಗಳು ಧರೆಗುರುಳಿವೆ. ರಾಜಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ 250 ಅಡಿಕೆ ಮರಗಳು ಸಂಪೂರ್ಣ ನಾಶವಾಗಿವೆ. ವಿಷಯ ತಿಳಿದ ಹೊನ್ನಾಳಿ ಶಾಸಕ ಶಾಂತನಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತನಿಗೆ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಭಾರೀ ಮಳೆ ಆಗಿದ್ದು, ಅಡಿಕೆ ತೋಟಗಳಿಗೆ ನೀರಿ ನುಗ್ಗಿದೆ.
ಇದನ್ನೂ ಓದಿ: ಶಿವಮೊಗ್ಗ: ಸಿಡಿಲು ಬಡಿದು ವ್ಯಕ್ತಿ ಸಾವು, ಮತ್ತೋರ್ವ ಗಂಭೀರ - Heavy Rain In Karnataka
ವರುಣನ ಅಬ್ಬರಕ್ಕೆ ವಿವಿಧ ಬೆಳೆಗಳು ಹಾನಿ (ಚಾಮರಾಜನಗರ): ಗುರುವಾರ ಚಾಮರಾಜನಗರ ತಾಲೂಕಿನ ಮಂಗಲ, ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಹನೂರು ತಾಲೂಕಿನ ಅಜ್ಜಿಪುರ ಗ್ರಾಮಗಳ ಸುತ್ತಮುತ್ತ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿತ್ತು. ಹನೂರು ತಾಲೂಕಿನ ಅಜ್ಜಿಪುರ ಸಮೀಪದ ಪಚ್ಚೇಗೌಡನದೊಡ್ಡಿ ಗ್ರಾಮದ ರೈತರ ಜಮೀನುಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಬೆಳೆ ಭಾರಿ ಗಾಳಿಗೆ ಅಪಾರ ಬೆಳೆ ಹಾನಿಯಾಗಿತ್ತು.