ಕರ್ನಾಟಕ

karnataka

ETV Bharat / videos

ಮೈಸೂರು: ಶರಣ ಸಂಗಮ ಮಠದಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು - ವಿಡಿಯೋ - COBRA RESCUED

By ETV Bharat Karnataka Team

Published : Dec 16, 2024, 3:40 PM IST

ಮೈಸೂರು: ದಕ್ಷಿಣ ಕಾಶಿ ನಂಜನಗೂಡು ನಗರದ ದೇವಿರಮ್ಮನಹಳ್ಳಿಯ ಶ್ರೀ ಶರಣ ಸಂಗಮ ಮಠದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ, ಹೆಡೆ ಎತ್ತಿ ನಿಂತು ಆತಂಕ ಸೃಷ್ಟಿಸಿತು.

ನಾಗರಾಜೇಂದ್ರ ಸ್ವಾಮೀಜಿಗಳು ನಾಗರಹಾವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಉರಗ ರಕ್ಷಕ ಗೋಳೂರು ಸ್ನೇಕ್ ಬಸವರಾಜು ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸ್ನೇಕ್ ಬಸವರಾಜು ಅವರು ನಾಗರಹಾವನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಕೆರೆ ಹಾವು ನುಂಗಿ ನರಳಾಡುತ್ತಿದ್ದ ಕಾಳಿಂಗ ಸರ್ಪ ಸೆರೆ: ಇತ್ತೀಚಿಗೆ, ಕೆರೆ ಹಾವು ನುಂಗಿ ಸಂಚರಿಸಲಾಗದೇ ನರಳಾಡುತ್ತಿದ್ದ ಸುಮಾರು 14 ಅಡಿ ಉದ್ದದ ಬೃಹತ್​​ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಗ್ರಾಮದ ಬಾಳೆಖಾನ್​​ ಕಚ್ಚನಹಕ್ಲು ಪ್ರಕಾಶ್​ ​ಎಂಬುವರ ತೋಟದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿತ್ತು. 

ಕೆರೆ ಹಾವು ನುಂಗಿ ಸಂಚರಿಸಲಾಗದೇ ನರಳಾಡುತ್ತ ಜೋರಾಗಿ ಉಸಿರು ಬಿಡುತ್ತಿರುವುದನ್ನು ಗಮನಿಸಿದ ತೋಟದ ಕೆಲಸಗಾರರು ಕಾಳಿಂಗ ಸರ್ಪವನ್ನು ನೋಡಿ ಭಯದಿಂದ ಓಡಿಹೋಗಿದ್ದರು. ತೋಟದ ಮಾಲೀಕ ಸ್ಥಳಕ್ಕೆ ಬಂದು ನೋಡಿ ಉರಗತಜ್ಞ ರಿಜ್ವಾನ್​ಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ರಿಜ್ವಾನ್ ಸುಮಾರು ಅರ್ಧ ಗಂಟೆಗಳ ಕಾಲ ತೋಟದೊಳಗೆ ಹುಡುಕಾಡಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದರು. 

ಇದನ್ನೂ ಓದಿ: Watch.. ಮೆಮೊರಿಯಲ್​ ಹಾಲ್​ನಲ್ಲಿ ಕಾಣಿಸಿಕೊಂಡ ಹೆಬ್ಬಾವು: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್‌ ಶ್ಯಾಮ್

ABOUT THE AUTHOR

...view details