ಹಾವೇರಿ: ಮಾಲತೇಶ ದೇವರ ದರ್ಶನ ಪಡೆದು ಸಂಗೊಳ್ಳಿ ರಾಯಣ್ಣ ಕಂಚಿನಮೂರ್ತಿ ಅನಾವರಣಗೊಳಿಸಿದ ಸಿಎಂ - CM Siddaramaiah - CM SIDDARAMAIAH
Published : Aug 30, 2024, 5:29 PM IST
ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಸಿಎಂ ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣ ಕಂಚಿನಮೂರ್ತಿ ಅನಾವರಣಗೊಳಿಸಿದರು. ಸಿಎಂ ಸಿದ್ದರಾಮಯ್ಯ ಇದೇ ವೇಳೆ ಕನಕಭವನ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಸ್ಥಳೀಯ ಶಾಸಕರು ಹಾಗೂ ದೇವರಗುಡ್ಡ ಗ್ರಾಮಸ್ಥರು ಭಾಗಿಯಾಗಿದ್ದರು. ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ದೇವರಗುಡ್ಡದ ಐತಿಹಾಸಿಕ ಮಾಲತೇಶ ದೇವರ ದರ್ಶನ ಪಡೆದರು.
ದೇವರಗುಡ್ಡದ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಂಕಷ್ಟ ನಿವಾರಣೆಗಾಗಿ ಕುರುಬ ಸಮಾಜದಿಂದ ರುದ್ರಾಭಿಷೇಕ, ಸಂಕಷ್ಟ ನಿವಾರಣೆಯ ಪೂಜೆ ಸಲ್ಲಿಸಲಾಯಿತು. ನಂತರ ಸಿಎಂ ಸಿದ್ದರಾಮಯ್ಯಗೆ ದೇವಸ್ಥಾನದಿಂದ ಬೆಳ್ಳಿಯ ಮಾಲತೇಶ ಭಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು.
ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಪ್ರವಾಸೋದ್ಯಮ ಸಚಿವ ಹೆಚ್. ಕೆ ಪಾಟೀಲ್, ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮತ್ತು ಸ್ಥಳೀಯ ಶಾಸಕರು ಸಾಥ್ ನೀಡಿದರು. ಸಿಎಂ ದೇವರಗುಡ್ಡಕ್ಕೆ ಆಗಮಿಸುವುದಕ್ಕಿಂತ ಮೊದಲು ಮಾಲತೇಶ ದೇವಸ್ಥಾನದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಇದನ್ನೂ ಓದಿ : ವಿಜಯೇಂದ್ರ ಕೇಳಿದ ಕೂಡಲೇ ನಾನು ರಾಜೀನಾಮೆ ಕೊಡಬೇಕಾ?: ಸಿಎಂ ಸಿದ್ದರಾಮಯ್ಯ - CM Siddaramaiah