ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರು: ಹಕ್ಕಿಗಳ ಗೂಡಿಗೆ ನುಗ್ಗಿ ಮೂರು ಪಕ್ಷಿ ತಿಂದು ಹಾಕಿದ ನಾಗರಹಾವು - Seven feet long snake found - SEVEN FEET LONG SNAKE FOUND

By ETV Bharat Karnataka Team

Published : May 11, 2024, 8:10 PM IST

ಚಿಕ್ಕಮಗಳೂರು: ಆಹಾರವನ್ನು ಹುಡುಕಿಕೊಂಡು ಪಕ್ಷಿಗಳ ಗೂಡಿಗೆ ನುಗ್ಗಿದ್ದ ಬರೋಬ್ಬರಿ ಏಳು ಅಡಿ ಉದ್ದದ ನಾಗರಹಾವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಚಕ್ಕಮಕ್ಕಿ ಗ್ರಾಮದಲ್ಲಿ ಸೆರೆ ಹಿಡಿಯಲಾಗಿದೆ.

ಗೂಡಿನಲ್ಲಿದ್ದ ಮೂರು ಪಕ್ಷಿ ಗಳನ್ನು ಈ ನಾಗರಹಾವು ತಿಂದು ಹಾಕಿದೆ. ಅದು ಗೂಡಿನಿಂದ ಹೊರ ಬರಲಾರದೇ ಅಲ್ಲೇ ಉಳಿದು ಪಕ್ಷಿಗಳನ್ನು ತಿನ್ನಲು ಪ್ರಯತ್ನಿಸಿದೆ. ಈ ವೇಳೆ ಪಕ್ಷಿಗಳು ಜೀವ ಉಳಿಸಿಕೊಳ್ಳಲು ಪರದಾಡಿವೆ. ಈ ಸಂದರ್ಭದಲ್ಲಿ ಮನೆ ಮಾಲೀಕನಿಗೆ ಪಕ್ಷಿಗಳ ಗೂಡಿನಲ್ಲಿ ಹಾವು ಬಂದು ಸೇರಿಕೊಂಡಿರುವ ಸಂಶಯ ಬಂದಿದೆ. 

ಗೂಡಿನಲ್ಲಿ ಹಾವು ಸೇರಿರುವುದನ್ನು ಖಚಿತಿ ಪಡಿಸಿಕೊಂಡ ಮನೆಯ ಮಾಲೀಕ ತಕ್ಷಣ ಮೂಡಿಗೆರೆಯ ಉರಗ ತಜ್ಞ ಆರಿಫ್ ಕೆ ಅವರಿಗೆ ಪೋನ್ ಮೂಲಕ ಮಾಹಿತಿ ನೀಡಿ, ಆತನನ್ನು ಕರೆಯಿಸಿಕೊಂಡಿದ್ದಾನೆ. ಗೂಡಿನಿಂದ ನಾಗರ ಹಾವನ್ನು ಹೊರ ತೆಗೆಯುವಲ್ಲಿ ಉರಗ ತಜ್ಞ ಅರೀಫ್ ಯಶಸ್ವಿಯಾಗಿದ್ದು,ಹಾವು ಹೊರ ಬರುತ್ತಿದ್ದಂತೆ ಉಳಿದ ಪಕ್ಷಿಗಳು ನಿಟ್ಟುಸಿರು ಬಿಟ್ಟಿವೆ. 

ಸೆರೆಹಿಡಿದ ನಾಗರಹಾವನ್ನು ರಕ್ಷಣೆ ಮಾಡಿ ಉರಗ ತಜ್ಞ ಚಾರ್ಮುಡಿ ಘಾಟ್ ನ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಟ್ಟಿದ್ದಾರೆ.

ಇದನ್ನೂಓದಿ:ಮೈಸೂರು: ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್​ ಅರಳಿ ಮರ, 4 ಮನೆಗಳು ಜಖಂ - tree fell down on the homes

ABOUT THE AUTHOR

...view details