Watch: ಬೈಕ್ ಸವಾರನಿಗೆ ಏಕಾಏಕಿ ಗುಮ್ಮಿದ ಕೋಲೆ ಬಸವ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bull Attack - BULL ATTACK
Published : Apr 5, 2024, 11:42 AM IST
|Updated : Apr 5, 2024, 4:29 PM IST
ಬೆಂಗಳೂರು: ಬೈಕ್ ಸವಾರನ ಮೇಲೆ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದ ಕೋಲೆ ಬಸವ ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಬೈಕ್ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಫೂಲ್ ರಸ್ತೆಯಲ್ಲಿ ರಘು ಎಂಬ ಯುವಕ ತಮ್ಮ ಪಾಡಿಗೆ ತಾನು ದ್ವಿಚಕ್ರದಲ್ಲಿ ಹೋಗುವಾಗ ಎದುರುಗಡೆಯಿಂದ ಮಹಿಳೆ ಕೋಲೆ ಬಸವನನ್ನು ಹಿಡಿದುಕೊಂಡು ಬರುತ್ತಿದ್ದಳು. ಇದ್ದಕ್ಕಿದ್ದಂತೆ ಅದೇನಾಯ್ತೋ ಏನೋ ಬಸವ ಎದುರುಗಡೆ ಬರುತ್ತಿದ್ದ ಬೈಕ್ ಸವಾರನ ಮೇಲೆ ಎಗರಿ ಗುದ್ದಿದೆ. ಇದರ ರಭಸಕ್ಕೆ ಬೈಕ್ ಸವಾರ ತನ್ನೆದುರು ಬರುತ್ತಿದ್ದ ಲಾರಿಯ ಕೆಳಗೆ ಬಿದ್ದಿದ್ದಾನೆ. ಪುಣ್ಯಕ್ಕೆ ಲಾರಿ ಚಾಲಕ ಕೂಡ ತಕ್ಷಣ ಸೈಡ್ಗೆ ತೆರಳಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬೈಕ್ ಚಾಲಕ ಲಾರಿಯ ಕೆಳಗೆ ಬಿದ್ದರೂ, ಅಪಾಯದಿಂದ ಬದುಕುಳಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈ ಜುಂ ಎನ್ನಿಸುವಂತಿದೆ.
ಇವುಗಳನ್ನೂ ಓದಿ: ಚಿಕ್ಕಮಗಳೂರು; ಭೀಕರ ರಸ್ತೆ ಅಪಘಾತ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಉಡುಪಿಯಲ್ಲಿ ಹಾಲಿನ ಕ್ರೇಟ್ಗಳಿಗೆ ಪಿಕಪ್ ವಾಹನ ಡಿಕ್ಕಿ: ರಸ್ತೆ ತುಂಬಾ ಕ್ಷೀರ - ವಿಡಿಯೋ