ಶ್ರೀಶೈಲದ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದ ಬಿಹಾರ ಕಾಂಗ್ರೆಸ್ ಶಾಸಕರು - ರಾಜಕೀಯ ಹೈಡ್ರಾಮಾ
Published : Feb 7, 2024, 2:54 PM IST
ಶ್ರೀಶೈಲಂ (ಆಂಧ್ರಪ್ರದೇಶ): ಬಿಹಾರದ 22 ಜನ ಕಾಂಗ್ರೆಸ್ ಶಾಸಕರು ಬುಧವಾರ ಬೆಳಗ್ಗೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಅಧಿಕಾರಿಗಳು ಕೃಷ್ಣದೇವರಾಯ ಗೋಪುರದಲ್ಲಿ ದೇವಸ್ಥಾನದ ಶಿಷ್ಟಾಚಾರದ ಪ್ರಕಾರ ಅವರನ್ನು ಸ್ವಾಗತಿಸಿದರು. ಭೇಟಿ ವೇಳೆ ಕಾಂಗ್ರೆಸ್ ಶಾಸಕರು ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ ಮತ್ತು ಭ್ರಮರಾಂಭಿಕಾದೇವಿಗೆ ಕುಂಕುಮಾರ್ಚನೆಯ ಪೂಜೆ ಸಲ್ಲಿಸಿದರು. ತೆಲಂಗಾಣ ರಾಜ್ಯ ಅಚ್ಚಂಪೇಟ್‌ನ ಕಾಂಗ್ರೆಸ್ ಶಾಸಕ ವಂಶಿಕೃಷ್ಣ ಅವರು ಶ್ರೀಶೈಲಂದಲ್ಲಿ ಶಾಸಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ದರ್ಶನ್ ಬಳಿಕ ಬಿಹಾರ ಶಾಸಕರು ಶ್ರೀಶೈಲಕ್ಕೆ ತೆರಳಿದರು.
ಬಿಹಾರ ರಾಜಕೀಯದ ಬಿಕ್ಕಟ್ಟು: ಜಾರ್ಖಂಡ್ ರಾಜಕೀಯ ಹೈಡ್ರಾಮಾ ಮುಗಿದಿದ್ದು, ಇದೀಗ ಬಿಹಾರ ರಾಜಕೀಯದ ಬಿಕ್ಕಟ್ಟು ಮುನ್ನೆಲೆಗೆ ಬಂದಿದೆ. ಆರ್ಜೆಡಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಬಿಜೆಪಿ ಜೊತೆಗೆ ಸರ್ಕಾರ ರಚಿಸಿರುವ ಸಿಎಂ ನಿತೀಶ್ಕುಮಾರ್ ಫೆಬ್ರವರಿ 12 ರಂದು ವಿಶ್ವಾಸಮತ ಪರೀಕ್ಷೆಗೆ ಒಳಗಾಗಲಿದ್ದು, ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತೆಲಂಗಾಣಕ್ಕೆ ಕರೆತಂದಿದೆ. ಸದ್ಯ ಅವರನ್ನು ಬಿಹಾರದಿಂದ ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ. ವಿಶ್ವಾಸ ಮತಯಾಚನೆಗೂ ಮುನ್ನ ಎಲ್ಲ ಕಾಂಗ್ರೆಸ್ ಶಾಸಕರನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕಾಗಜ್ ಘಾಟ್ ಸಿರಿ ನೇಚರ್ ವ್ಯಾಲಿಗೆ ಕರೆತರಲಾಗಿದೆ.
ಇದನ್ನೂ ಓದಿ: ಫೆಬ್ರವರಿ 12ಕ್ಕೆ ವಿಶ್ವಾಸಮತ ಪರೀಕ್ಷೆ: ತೆಲಂಗಾಣದಿಂದ ಆಂಧ್ರದ ಶ್ರೀಶೈಲಕ್ಕೆ ಬಿಹಾರ ಶಾಸಕರ ಸ್ಥಳಾಂತರ