ಬೆಂಗಳೂರು: ಪಾದಚಾರಿ ಮೇಲೆ ವಾಟರ್ ಟ್ಯಾಂಕರ್ ಪಲ್ಟಿ, ಸ್ಥಳದಲ್ಲೇ ಸಾವನ್ನಪ್ಪಿದ ಯುವಕ - ವಾಟರ್ ಟ್ಯಾಂಕರ್ ಪಲ್ಟಿ
Published : Feb 21, 2024, 2:01 PM IST
ಬೆಂಗಳೂರು: ನಿಯಂತ್ರಣ ತಪ್ಪಿದ ವಾಟರ್ ಟ್ಯಾಂಕರ್ ರಸ್ತೆ ಬದಿ ಪಲ್ಟಿಯಾದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಪೀಣ್ಯ ಎರಡನೇ ಹಂತದ ತಿಗಳರಪೇಟೆ ರಸ್ತೆಯಲ್ಲಿ ಸಂಭವಿಸಿದೆ. ಮೃತರನ್ನು ಇಮಾನುದ್ದೀನ್ (20) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ವೇಗವಾಗಿ ಬಂದ ವಾಟರ್ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿದೆ. ಈ ವೇಳೆ, ಕೆಲಸಕ್ಕೆ ಎಂದು ನಡೆದುಕೊಂಡು ತೆರಳುತ್ತಿದ್ದ ಇಮಾನುದ್ದೀನ್ ಮೇಲೆ ಟ್ಯಾಂಕರ್ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೀಣ್ಯ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಬಿಎಂಟಿಸಿ ನೌಕರರಿಗೂ 1 ಕೋಟಿ ರೂ. ಅಪಘಾತ ವಿಮೆ: ಬಿಎಂಟಿಸಿ ನೌಕರರಿಗೂ ಕೆಎಸ್‌ಆರ್‌ಟಿಸಿ ನೌಕರರ ಮಾದರಿಯಲ್ಲೇ ಒಂದು ಕೋಟಿ ರೂಪಾಯಿ ಅಪಘಾತ ವಿಮೆ ನೀಡಲು ಸರ್ಕಾರ ಮುಂದಾಗಿದೆ. ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ಇತ್ತೀಚೆಗೆ ತಿಳಿಸಿದ್ದರು.ಕೆಎಸ್‌ಆರ್‌ಟಿಸಿ ನೌಕರರಿಗೆ ಅಪಘಾತ ವಿಮಾ ಪರಿಹಾರವನ್ನು 1 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಬಿಎಂಟಿಸಿ ನೌಕರರಿಗೂ 3 ಲಕ್ಷ ರೂಪಾಯಿ ಇದ್ದಂತಹ ಅಪಘಾತ ವಿಮಾ ಪರಿಹಾರ ಮೊತ್ತವನ್ನು 1 ಕೋಟಿ ರೂ.ಗೆ ಹೆಚ್ಚಳ ಮಾಡಿ ಸರಕಾರ ಆದೇಶಿಸಿದೆ. ಓದಿ: ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಕಾರು, ಪ್ರಾಣಾಪಾಯದಿಂದ ಆರು ಮಂದಿ ಪಾರು