ಕರ್ನಾಟಕ

karnataka

ಮಹಾವೀರಿ ಮೆರವಣಿಗೆ ವೇಳೆ ಬಾಲ್ಕನಿ ಕುಸಿತ, 100ಕ್ಕೂ ಹೆಚ್ಚು ಜನರಿಗೆ ಗಾಯ: ವಿಡಿಯೋ - BALCONY COLLAPSE

By ETV Bharat Karnataka Team

Published : Sep 4, 2024, 10:58 PM IST

‘ಮಹಾವೀರಿ ಮೆರವಣಿಗೆ ವೇಳೆ ಬಾಲ್ಕನಿ ಕುಸಿತ (ETV Bharat)

ಬಿಹಾರ: ಇಲ್ಲಿನ ಛಾಪ್ರಾದಲ್ಲಿ ನಡೆದ ಮಹಾವೀರಿ ಮೆರವಣಿಗೆಯಲ್ಲಿ ಆರ್ಕೆಸ್ಟ್ರಾ ಪ್ರದರ್ಶನದ ವೇಳೆ ಬಾಲ್ಕನಿ ಕುಸಿದು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಂಗಳವಾರ ಈ ಅಪಘಾತ ಸಂಭವಿಸಿದ್ದು, ಆರ್ಕೆಸ್ಟ್ರಾ ನೋಡಲು ನೂರಾರು ಪ್ರೇಕ್ಷಕರು ಬಾಲ್ಕನಿ ಮೇಲೆ ನಿಂತಿದ್ದರು.

ಸಂಗೀತ ಪ್ರದರ್ಶನವನ್ನ ಆನಂದಿಸಲು ಸಾವಿರಾರು ಸ್ಥಳೀಯರು ವೇದಿಕೆಯ ಸುತ್ತಲೂ ಮತ್ತು ರಸ್ತೆ ಬದಿಯಲ್ಲಿ ಜಮಾಯಿಸಿದ್ದರು. ಬಿಹಾರದ ಛಾಪ್ರಾದಲ್ಲಿ ಪ್ರದರ್ಶನವನ್ನ ವೀಕ್ಷಿಸಲು ಜನರು ಬಾಲ್ಕನಿಗಳು, ಮರಗಳು ಮತ್ತು ಮೇಲ್ಛಾವಣಿಗಳನ್ನು ಹತ್ತಿದ್ದರು. 

ಜನಸಮೂಹವು ಕುಣಿದು ಕುಪ್ಪಳಿಸುತ್ತಿದ್ದಂತೆ ಬಾಲ್ಕನಿ ಇದ್ದಕ್ಕಿದ್ದಂತೆ ಕುಸಿದಿದ್ದು, ನೂರಾರು ಜನರು ಕೆಳಗೆ ನಿಂತಿದ್ದವರ ಮೇಲೆ ಬಿದ್ದಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಿಂದ ಭಯಭೀತಗೊಂಡ ಜನರು ಜೋರಾಗಿ ಕೂಗಲು ಶುರು ಮಾಡಿದ್ದರು. ಇನ್ನು ಗಾಯಳುಗಳನ್ನು ತಕ್ಷಣ ಜನರು ಇಸುವಾಪುರ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಹಲವರು ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಮಹಾವೀರ ಧ್ವಜ ಮೆರವಣಿಗೆ ನಡೆಯುತ್ತಿತ್ತು. ಅನೇಕ ವಾದ್ಯವೃಂದಗಳೂ ಇದರಲ್ಲಿ ಭಾಗವಹಿಸಿದ್ದವು.

ಇದನ್ನೂ ಓದಿ: ಮೂಲನಂದೀಶ್ವರ ಜಾತ್ರಾ ಮಹೋತ್ಸವ: ರೋಮಾಂಚನಕಾರಿಯಾಗಿ ನಡೆದ ಟ್ರ‍್ಯಾಕ್ಟರ್ ಜಗ್ಗುವ ಸ್ಪರ್ಧೆ - Moolandishwar fair

ABOUT THE AUTHOR

...view details