ಜನರಿಗೆ ದ್ರೋಹ ಮಾಡಿದ ವ್ಯಕ್ತಿ ಅನಂತಕುಮಾರ ಹೆಗಡೆ : ಶಿರಸಿಯಲ್ಲಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ - ಅನಂತ್ ಕುಮಾರ್ ಹೆಗ್ಡೆ
Published : Jan 20, 2024, 2:34 PM IST
ಶಿರಸಿ: ''ಸಂಸದ ಅನಂತಕುಮಾರ್ ಹೆಗಡೆ ಒಬ್ಬ ಹುಚ್ಚ. ಅವನಿಗೆ ಸಂಸ್ಕೃತಿ ಇಲ್ಲ. ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತಕುಮಾರ್ ಹೆಗಡೆ'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ. ನಾಲ್ಕು ವರ್ಷ ಸುಮ್ಮನೆ ಕೂತ್ಕೋಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು'' ಎಂದು ಏಕವಚನಲ್ಲೇ ಹರಿಹಾಯ್ದರು. ''ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವ್ರಿಗೆ ನಾವು ಧಿಕ್ಕಾರ ಮಾಡ್ಲೇಬೇಕು. ಜನ ಅವರನ್ನ ಬದಲಾವಣೆ ಮಾಡ್ತಾರೆ. ಬಿಜೆಪಿ ಅವರಿಗೆ ಟಿಕೆಟ್ ಕೊಡ್ಬೇಕು. ನಾವೇ ಇಲ್ಲಿಗೆ ಬರ್ತೀವಿ, ಅವರನ್ನು ಉಪಚಾರ ಮಾಡೋಕೆ ಹೋಗಿ ನಾನು ಕೂಡ ಸೋತಿದಿನಿ. ಆದ್ರೆ, ಮಾನ ಮರ್ಯಾದೆ ಬಿಟ್ಟು ಈ ತರ ಮಾಡೋದನ್ನ ಮಾಡಿಲ್ಲ'' ಎಂದು ಟೀಕಿಸಿದರು.
''ಬಿ.ಕೆ. ಹರಿಪ್ರಸಾದ್ ವಿಚಾರದಲ್ಲಿ ಕಾನೂನಾತ್ಮಕವಾಗಿ ಸರ್ಕಾರ ನಡೆದುಕೊಂಡಿದೆ. ಎಲ್ಲರ ವಿಷಯದಲ್ಲೂ ಕಾನೂನೇ ಮುಖ್ಯ. ಎಲ್ಲರಿಗೂ ಒಂದೇ ಅದನ್ನು ಅರಿತುಕೊಳ್ಳಬೇಕಿದೆ'' ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಸಿಸಿಬಿಯಿಂದ ಆರೋಪಿ ಸಬ್ ಇನ್ಸ್‌ಪೆಕ್ಟರ್ ವಿಚಾರಣೆ