ಕರ್ನಾಟಕ

karnataka

ETV Bharat / videos

Watch in video: ಕೆರೆ ಹಾವು ನುಂಗಿ ನರಳಾಡುತ್ತಿದ್ದ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - KING COBRA RESCUED

By ETV Bharat Karnataka Team

Published : Dec 12, 2024, 11:39 AM IST

ಚಿಕ್ಕಮಗಳೂರು: ಕೆರೆ ಹಾವು ನುಂಗಿ ಸಂಚರಿಸಲಾಗದೇ ನರಳಾಡುತ್ತಿದ್ದ ಸುಮಾರು 14 ಅಡಿ ಉದ್ದದ ಬೃಹತ್​​ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಕಳಸ ತಾಲೂಕಿನ ಮಾವಿನಕೆರೆ ಗ್ರಾಮದ ಬಾಳೆಖಾನ್​​ ಕಚ್ಚನಹಕ್ಲು ಪ್ರಕಾಶ್​ ​ಎಂಬುವರ ತೋಟದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿತ್ತು. 

ಕೆರೆ ಹಾವು ನುಂಗಿ ಸಂಚರಿಸಲಾಗದೇ ನರಳಾಡುತ್ತಾ ಜೋರಾಗಿ ಉಸಿರು ಬಿಡುತ್ತಿರುವುದನ್ನು ಗಮನಿಸಿದ ತೋಟದ ಕೆಲಸಗಾರರು ಕಾಳಿಂಗ ಸರ್ಪವನ್ನು ನೋಡಿ ಭಯಗೊಂಡು ಓಡಿಹೋಗಿದ್ದಾರೆ. ತೋಟದ ಮಾಲೀಕ ಸ್ಥಳಕ್ಕೆ ಬಂದು ನೋಡಿ ಉರಗತಜ್ಞ ರಿಜ್ವಾನ್​ಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ರಿಜ್ವಾನ್ ಸುಮಾರು ಅರ್ಧ ಗಂಟೆಗಳ ಕಾಲ ತೋಟದೊಳಗೆ ಹುಡುಕಾಡಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. 

ಸೆರೆ ಹಿಡಿಯುವ ವೇಳೆ ನುಂಗಿದ್ದ ಕೆರೆ ಹಾವನ್ನು ಹೊರಹಾಕಲು ಕಾಳಿಂಗ ಸರ್ಪ ಯತ್ನಿಸಿದೆ. ಆದರೆ, ಉರಗತಜ್ಞ ರಿಜ್ವಾನ್ ಹಾವನ್ನು ಹೊರಹಾಕಿಸದೇ ಕಾಳಿಂಗ ಸರ್ಪವನ್ನು ಸೆರೆಹಿಡಿದು ಕಳಸ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದಾರೆ. ಸದ್ಯ ಕೆಲಸಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: Watch.. ಮೆಮೊರಿಯಲ್​ ಹಾಲ್​ನಲ್ಲಿ ಕಾಣಿಸಿಕೊಂಡ ಹೆಬ್ಬಾವು: ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್‌ ಶ್ಯಾಮ್

ABOUT THE AUTHOR

...view details