ನವದೆಹಲಿ:ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾದ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಶಾರ್ಟ್ ಇದೀಗ ದೇಶದಲ್ಲಿ ಟ್ರಿಲಿಯನ್ಗಟ್ಟಲೇ ವೀಕ್ಷಣೆ ಪಡೆದಿದೆ. ದೇಶಿಯ ಕ್ರಿಯೇಟರ್ಗಳ ಸ್ಥಳೀಯ ಟ್ರೇಡ್ಗೆ ಅನುಸಾರವಾಗಿ ಪ್ರೇರಿತ ವಿಡಿಯೋಗಳನ್ನು ಇದರಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಯೂಟ್ಯೂಬ್ನ ಸಿಇಒ ನೀಲ್ ಮೋಹನ್ ತಿಳಿಸಿದ್ದಾರೆ.
ಭಾರತೀಯ ಕ್ರಿಯೇಟರ್ಗಳು ಇದರ ಮೂಲಕ ಕೇವಲ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲ. ಅವರು ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ರವಾನಿಸುತ್ತಿದ್ದಾರೆ. 11 ಸಾವಿರಕ್ಕೂ ಹೆಚ್ಚಿನ ಭಾರತೀಯ ಚಾನಲ್ಗಳು ಮಿಲಿಯನ್ಗಟ್ಟಲೇ ಸಬ್ಸ್ಕ್ರೈಬರ್ಗಳನ್ನು ಹೊಂದಿದ್ದಾರೆ. ಈ ಚಂದಾದಾರರು ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ಯೂಟ್ಯೂಬ್ ಆಯೋಜಿಸಿದ್ದ ಬ್ರಾಂಡ್ಕ್ಯಾಸ್ಟ್ 2024 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಯ ಬದಲಾಗಿದೆ. ಇದೀಗ ಕ್ರಿಯೇಟರ್ಗಳು ಹೊಸ ಎ ಲಿಸ್ಟ್ನಲ್ಲಿದ್ದಾರೆ. ಯೂಟ್ಯೂಬ್ನಲ್ಲಿ ತಮ್ಮ ಹಾಸ್ಯದ ಪ್ರಯಾಣ ಆರಂಭಿಸಿದ ಪ್ರಜಕ್ತಾ ಕೋಲಿ ಇದೀಗ ನೆಟ್ಫ್ಲಿಕ್ನ ಸೀರಿಸ್ನಲ್ಲಿ ತಮ್ಮದೇ ಪಾತ್ರ ನಿರ್ವಹಿಸುವ ಜೊತೆಗೆ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. 9 ವರ್ಷದ ಹಿಂದೆ ಯೂಟ್ಯೂಬ್ ಸೇರಿದ ಪಂಜಾಬಿ ಕಲಾವಿದ ದಿಲ್ಜಿತ್ ದೋಸಾಂಜ್ ಕೋಚೆಲ್ಲಾದಲ್ಲಿ ಪ್ರದರ್ಶನ ತೋರಿದ್ದಾರೆ.
ಕ್ರಿಯೇಟರ್ಸ್ ಮತ್ತು ಕಲಾವಿದರು ಉದ್ಯಮದ ತಂತ್ರ, ಬರವಣಿಗೆ, ನಿರ್ಮಾಣ ಮತ್ತು ಕಂಟೆಂಟ್ ಸೃಷ್ಟಿಸುವ ಜವಾಬ್ದಾರಿಯನ್ನು ಹೊಂದಿದ್ದು, ಜನರು ಪ್ರೀತಿಯಿಂದ ಇವುಗಳನ್ನು ನೋಡುತ್ತಿದ್ದಾರೆ. ಯೂಟ್ಯೂಬ್ನ ಬೆಳವಣಿಗೆಯ ಚಾಲಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದಲ್ಲಿ ಮೊದಲ ಸ್ಥಾನ ತಲುಪಿದ್ದು, ಇದೀಗ ಯೂಟ್ಯೂಬ್ ಹೆಚ್ಚಿನ ವಾಚ್ಟೈಮ್ ಆಗಿದೆ ಎಂದರು.