ಕರ್ನಾಟಕ

karnataka

ETV Bharat / technology

2023ರ 4ನೇ ತ್ರೈಮಾಸಿಕದಲ್ಲಿ 22 ಲಕ್ಷ ವಿಡಿಯೋ ತೆಗೆದುಹಾಕಿದ ಯೂಟ್ಯೂಬ್ - YouTube - YOUTUBE

ನಿಯಮ ಉಲ್ಲಂಘನೆ ಕಾರಣಗಳಿಗಾಗಿ ಯೂಟ್ಯೂಬ್ 22 ಲಕ್ಷಕ್ಕೂ ಅಧಿಕ ವಿಡಿಯೋಗಳನ್ನು ತೆಗೆದುಹಾಕಿದೆ.

YouTube
YouTube

By ETV Bharat Karnataka Team

Published : Mar 26, 2024, 5:15 PM IST

ನವದೆಹಲಿ: 2023ರ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಸಮುದಾಯದ ಮಾರ್ಗಸೂಚಿ (community guidelines) ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದಲ್ಲಿ 2.25 ದಶಲಕ್ಷಕ್ಕೂ (22.5 ಲಕ್ಷ) ಹೆಚ್ಚು ವಿಡಿಯೋಗಳನ್ನು ಯೂಟ್ಯೂಬ್​ನಿಂದ ಡಿಲೀಟ್ ಮಾಡಲಾಗಿದೆ ಎಂದು ಕಂಪನಿ ಮಂಗಳವಾರ ತನ್ನ ವರದಿಯಲ್ಲಿ ಹೇಳಿದೆ. ಭಾರತದಲ್ಲಿ 2023ರ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಪ್ಲಾಟ್​ಫಾರ್ಮ್​ನಿಂದ ಡಿಲೀಟ್​ ಮಾಡಲಾದ ವಿಡಿಯೋಗಳ ಸಂಖ್ಯೆ 30 ದೇಶಗಳ ಪೈಕಿ ಅತ್ಯಧಿಕವಾಗಿದೆ ಎಂದು ಯೂಟ್ಯೂಬ್ ತಿಳಿಸಿದೆ.

ಸಿಂಗಾಪುರದಲ್ಲಿ 12,43,871 ಮತ್ತು ಅಮೆರಿಕದಲ್ಲಿ 7,88,354 ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು, ಇವು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇರಾಕ್​ನಲ್ಲಿ 41,176 ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದ್ದು, ಇದು ಕೊನೆಯ ಸ್ಥಾನದಲ್ಲಿದೆ.

ಜಾಗತಿಕವಾಗಿ ನೋಡುವುದಾದರೆ- ಈ ಅವಧಿಯಲ್ಲಿ ಯೂಟ್ಯೂಬ್ 9 ಮಿಲಿಯನ್ ವಿಡಿಯೋಗಳನ್ನು ತೆಗೆದುಹಾಕಿದೆ. ಹೀಗೆ ತೆಗೆದು ಹಾಕಲಾದ 9 ಮಿಲಿಯನ್ ವಿಡಿಯೋಗಳ ಪೈಕಿ ಶೇಕಡಾ 96 ರಷ್ಟು ವಿಡಿಯೋಗಳನ್ನು ತಂತ್ರಜ್ಞಾನದ ಮೂಲಕವೇ ಮೊದಲಿಗೆ ಕಂಡು ಹಿಡಿಯಲಾಗಿದೆ. ಅಂದರೆ ಈ ವಿಡಿಯೋಗಳು ಯೂಟ್ಯೂಬ್​ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿವೆ ಎಂಬುದನ್ನು ಸ್ವಯಂ ಚಾಲಿತವಾಗಿ ಕಂಡು ಹಿಡಿಯಲಾಗಿತ್ತು.

ಈ ಪೈಕಿ ಶೇಕಡಾ 53.46 ರಷ್ಟು ವಿಡಿಯೋಗಳು ಒಂದೇ ಒಂದು ವೀಕ್ಷಣೆ (view) ಪಡೆಯುವ ಮೊದಲೇ ತೆಗೆದು ಹಾಕಲಾಗಿದೆ ಮತ್ತು ಶೇಕಡಾ 27.07 ರಷ್ಟು ವಿಡಿಯೋಗಳು ಅವನ್ನು ತೆಗೆದುಹಾಕುವ ಮೊದಲು 1 ರಿಂದ 10 ವೀಕ್ಷಣೆಗಳನ್ನು ಪಡೆದಿದ್ದವು ಎಂದು ಯೂಟ್ಯೂಬ್ ಹೇಳಿಕೆಯಲ್ಲಿ ತಿಳಿಸಿದೆ.

"ವಿಡಿಯೋ ಅಪ್​ಲೋಡ್ ಮಾಡಿದವರು ಯಾರು, ಕಂಟೆಂಟ್​ ಅನ್ನು ಎಲ್ಲಿಂದ ಅಪ್​ಲೋಡ್ ಮಾಡಲಾಗಿದೆ ಅಥವಾ ಕಂಟೆಂಟ್​ ಅನ್ನು ಹೇಗೆ ಸೃಷ್ಟಿಸಲಾಗಿದೆ ಎಂಬ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳದೇ ಯೂಟ್ಯೂಬ್​ನ ಸಮುದಾಯ ಮಾರ್ಗಸೂಚಿಗಳನ್ನು ವಿಶ್ವಾದ್ಯಂತ ನಿರಂತರವಾಗಿ ಜಾರಿಗೊಳಿಸಲಾಗುತ್ತದೆ. ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಟೆಂಟ್​ ಅನ್ನು ತೆಗೆದುಹಾಕಿದಾಗ, ಅದನ್ನು ಜಾಗತಿಕವಾಗಿ ತೆಗೆದುಹಾಕಲಾಗುತ್ತದೆ ಮತ್ತು ಯಂತ್ರ ಕಲಿಕೆ ಮತ್ತು ಮಾನವ ವಿಮರ್ಶಕರ ಸಂಯೋಜನೆ ಬಳಸಿಕೊಂಡು ನೀತಿಗಳನ್ನು ಜಾರಿಗೆ ತರಲಾಗುತ್ತದೆ" ಎಂದು ಯೂಟ್ಯೂಬ್ ಹೇಳಿದೆ.

ಇದಲ್ಲದೇ ಸ್ಪ್ಯಾಮ್, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಕಿರುಚಿತ್ರಗಳು, ವಿಡಿಯೋ ಮತ್ತು ಕಾಮೆಂಟ್​ಗಳ ಸ್ಪ್ಯಾಮ್ ಸೇರಿದಂತೆ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬ್ 2023 ರ ನಾಲ್ಕನೇ ತ್ರೈಮಾಸಿಕದಲ್ಲಿ 20 ದಶಲಕ್ಷಕ್ಕೂ ಹೆಚ್ಚು ಚಾನೆಲ್​ಗಳನ್ನು ತೆಗೆದುಹಾಕಿದೆ. 1.1 ಬಿಲಿಯನ್ ಗಿಂತ ಹೆಚ್ಚು ಕಾಮೆಂಟ್ ಗಳನ್ನು ಸಹ ತೆಗೆದುಹಾಕಲಾಗಿದೆ. ಅವುಗಳಲ್ಲಿ ಹೆಚ್ಚಿನವು ಸ್ಪ್ಯಾಮ್ ಆಗಿದ್ದವು. ತೆಗೆದುಹಾಕಿದ ಕಾಮೆಂಟ್​ಗಳಲ್ಲಿ ಶೇಕಡಾ 99 ಕ್ಕಿಂತ ಹೆಚ್ಚು ಸ್ವಯಂಚಾಲಿತವಾಗಿ ಪತ್ತೆಯಾಗಿವೆ ಎಂದು ಯೂಟ್ಯೂಬ್ ಹೇಳಿದೆ.

ಇದನ್ನೂ ಓದಿ : ಇಸ್ರೊದಿಂದ ಬಾಹ್ಯಾಕಾಶ ವಿಜ್ಞಾನ ತರಬೇತಿ: ನೋಂದಣಿ ಹೇಗೆ? - ISRO

For All Latest Updates

ABOUT THE AUTHOR

...view details