YouTube Big Update:ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಯೂಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ ನೀಡಿದೆ. ಅದೇನೆಂದರೆ, ಇನ್ನು ಮುಂದೆ 3 ನಿಮಿಷಗಳ ಗರಿಷ್ಠ ಶಾರ್ಟ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ. ಅಕ್ಟೋಬರ್ 15ರಿಂದ ಈ ಸೇವೆಗಳು ಲಭ್ಯ. ಈ ಹಿಂದೆ, ಶಾರ್ಟ್ ವಿಡಿಯೋಗಳ ಗರಿಷ್ಠ ಅವಧಿ ಕೇವಲ 60 ಸೆಕೆಂಡುಗಳಾಗಿತ್ತು.
ಅಕ್ಟೋಬರ್ 15ಕ್ಕೆ ಮೊದಲು ನೀವು ಅಪ್‌ಲೋಡ್ ಮಾಡಿದ ಯಾವುದೇ ವಿಡಿಯೋಗಳ ಮೇಲೂ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಮುಂಬರುವ ತಿಂಗಳುಗಳಲ್ಲಿ ಲಾಂಗ್ ಶಾರ್ಟ್ಗಳ ಅಗತ್ಯತೆಗಳನ್ನು ಸುಧಾರಿಸಲು ನಾವು ಕೆಲಸ ಮಾಡುತ್ತೇವೆ ಎಂದು ಕಂಪನಿ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.
ಕಂಟೆಂಟ್ ಕ್ರಿಯೆಟರ್ಸ್ ತಮ್ಮ ವಿಡಿಯೋಗಳನ್ನು ಹೆಚ್ಚು ಕಾಲ ಇರಿಸಿಕೊಳ್ಳಲು 16:9ನಂತಹ ವಿಶಾಲ ಆಕಾರ ಅನುಪಾತದಲ್ಲಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಬಹುದು. ಅಕ್ಟೋಬರ್ 15ರ ಕಟ್‌ಆಫ್‌ನ ಮೊದಲು ಅಪ್‌ಲೋಡ್ ಮಾಡಿದ 60 ಸೆಕೆಂಡುಗಳು ಮತ್ತು 3 ನಿಮಿಷಗಳ ನಡುವಿನ ವರ್ಟಿಕಲ್ ವಿಡಿಯೋಗಳನ್ನು ಹೊಂದಿರುವ ಕ್ರಿಯೆಟರ್ಸ್ ರೆಗ್ಯುಲರ್ ಲಾಂಗ್ ಫೇಮ್ ಕಂಟೆಂಟ್ ಆಗಿ ಕಾಣಿಸಿಕೊಳ್ಳುತ್ತಾರೆ.
ಲಾಂಗ್ ಶಾರ್ಟ್ ಕಾಪಿರೈಟ್ನ ಆಡಿಯೋ ಮತ್ತು ವಿಡಿಯೋ ಬಳಕೆಯ ಕುರಿತು YouTube ತನ್ನ ನೀತಿಗಳನ್ನು ವಿವರಿಸಿದೆ. ಹಕ್ಕುಸ್ವಾಮ್ಯದ ವಿಷಯವನ್ನು ಒಳಗೊಂಡಿರುವ 60 ಸೆಕೆಂಡುಗಳಿಗಿಂತ ಹೆಚ್ಚು ಅವಧಿಯ ಯಾವುದೇ ಶಾರ್ಟ್ ವಿಡಿಯೋ ಇದ್ರೆ ಅದು ಆಟೋಮೆಟಿಕ್ ಆಗಿ ಬ್ಲಾಕ್ ಆಗುತ್ತದೆ. ಆದರೆ ಇದು ಕಂಟೆಂಟ್ ಕ್ರಿಯೇಟರ್‌ನ ಚಾನೆಲ್ ಮೇಲೆ ಪರಿಣಾಮ ಬೀರದೆ ಅದನ್ನು ಪ್ಲೇ ಮಾಡಲಾಗದಂತೆ ಮಾಡುತ್ತದೆ.