Improve Internet Speed on Mobile:ಈಗ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5G ನೆಟ್‌ವರ್ಕ್ ಅನ್ನು ಆನಂದಿಸುತ್ತಿದ್ದಾರೆ. ಆದರೆ ನಿಧಾನಗತಿಯ ಇಂಟರ್ನೆಟ್ ಸಮಸ್ಯೆ ದೇಶದ ಹಲವು ಭಾಗಗಳಲ್ಲಿ ಇನ್ನೂ ಇದೆ. ಇದಲ್ಲದೆ ಕೆಲವೊಮ್ಮೆ ಫೋನ್‌ನಿಂದಾಗಿ ವೇಗದ ಇಂಟರ್ನೆಟ್ ಬಳಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ವಿಡಿಯೋಗಳನ್ನು ಸ್ಟ್ರೀಮಿಂಗ್ ಮಾಡಲು, ಸಾಮಾಜಿಕ ಮಾಧ್ಯಮವನ್ನು ಬ್ರೌಸ್ ಮಾಡಲು ಅಥವಾ ಪ್ರಯಾಣದಲ್ಲಿರುವಾಗ ಕೆಲಸ ಮಾಡಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಸ್ಮಾರ್ಟ್‌ಫೋನ್‌ನಲ್ಲಿ ನಿಧಾನಗತಿಯ ಇಂಟರ್ನೆಟ್‌ಗೆ ಅನೇಕ ಕಾರಣಗಳಿರಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಬಗ್ಗೆ ಹಲವು ಮಾರ್ಗಗಳಿವೆ. ಆ ಮಾರ್ಗಗಳನ್ನು ಅನುಸರಿಸುವ ಮೂಲಕ ನಿಮ್ಮ ಫೋನ್‌ನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು.
1. ಫೋನ್ ರಿಸ್ಟಾರ್ಟ್:ನಿಮ್ಮ ಫೋನ್ ಸಾಫ್ಟ್‌ವೇರ್ ಗ್ಲಿಚ್‌ಗಳನ್ನು ಎದುರಿಸುವುದರಿಂದ ಇಂಟರ್ನೆಟ್ ನಿಧಾನಗೊಳ್ಳಲು ಕಾರಣವಾಗಬಹುದು. ನಿರಂತರ ಕಾರ್ಯಾಚರಣೆಯಲ್ಲಿದ್ದರೂ ಫೋನ್‌ನ ಸಾಫ್ಟ್‌ವೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು. ಸಾಫ್ಟ್‌ವೇರ್ ಅನ್ನು ರಿಫ್ರೆಶ್ ಮಾಡಲು ನಿಮ್ಮ ಫೋನ್ ಅನ್ನು ನೀವು ರಿಸ್ಟಾರ್ಟ್ ಮಾಡಬೇಕು. ಆಗ ನಿಮ್ಮ ಫೋನ್ ಇಂಟರ್ನೆಟ್ ಅನ್ನು ಸರಿಯಾಗಿ ರನ್ ಆಗುವಂತೆ ಮಾಡುತ್ತದೆ.
2. ಬ್ಯಾಕ್ಗ್ರೌಂಡ್ ಆ್ಯಪ್ಸ್ಗಳನ್ನು ಕ್ಲೋಸ್ ಮಾಡಿ:ಹಲವು ಬಾರಿ ನಿಮ್ಮ ಫೋನ್‌ನಲ್ಲಿ ಅನೇಕ ಬ್ಯಾಕ್ಗ್ರೌಂಡ್ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಅದು ನಿಮ್ಮ ಫೋನ್‌ನಲ್ಲಿ ಬಹಳಷ್ಟು ಡೇಟಾವನ್ನು ಕಡಿತಗೊಳಿಸುತ್ತಿರುತ್ತದೆ. ಇದು ನಿಮ್ಮ ಫೋನ್‌ನ ಇಂಟರ್ನೆಟ್ ಅನ್ನು ನಿಧಾನಗೊಳಿಸುತ್ತದೆ. ಡೇಟಾವನ್ನು ಉಳಿಸಲು ಮತ್ತು ನಿಮ್ಮ ಇಂಟರ್ನೆಟ್ ವೇಗವನ್ನು ಹೆಚ್ಚಿಸಲು ನೀವು ಬಳಸದ ಅಪ್ಲಿಕೇಶನ್‌ಗಳನ್ನು ನೀವು ಕ್ಲೋಸ್ ಮಾಡಬೇಕಾಗುತ್ತದೆ.
3. ಜಾಹೀರಾತು ಬ್ಲಾಕರ್ ಬಳಕೆ:ಚಿತ್ರಗಳು ಮತ್ತು ಲಿಂಕ್‌ಗಳಂತಹ ಅನೇಕ ರೀತಿಯ ಜಾಹೀರಾತು ಪಾಪ್-ಅಪ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇವುಗಳಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ ಡೇಟಾವೂ ಬಳಕೆಯಾಗುತ್ತದೆ. ಆಗ ಇಂಟರ್ನೆಟ್ ವೇಗ ನಿಧಾನವಾಗುತ್ತದೆ. ಈ ಜಾಹೀರಾತುಗಳನ್ನು ಬಂದ್ ಮಾಡಲು ನೀವು ಜಾಹೀರಾತು ಬ್ಲಾಕರ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ನೀವು Google Play Store ನಲ್ಲಿ ಹಲವಾರು ರೀತಿಯ ಜಾಹೀರಾತು ಬ್ಲಾಕರ್ ಅಪ್ಲಿಕೇಶನ್‌ಗಳನ್ನು ಕಾಣಬಹುದು. ಅದರಲ್ಲಿ ನೀವು ಉತ್ತಮ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಬಹುದು.