ಕರ್ನಾಟಕ

karnataka

ETV Bharat / technology

ನಿಯಮ ಉಲ್ಲಂಘನೆ: ಮಾರ್ಚ್​ನಲ್ಲಿ 2 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದ 'ಎಕ್ಸ್​' - X Corp - X CORP

ಮಾರ್ಚ್​ನಲ್ಲಿ ಎಕ್ಸ್​ ಭಾರತದಲ್ಲಿ 2 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿಷೇಧಿಸಿದೆ.

X bans over 2 lakh accounts for policy violations in India in March
X bans over 2 lakh accounts for policy violations in India in March

By ETV Bharat Karnataka Team

Published : Apr 14, 2024, 12:06 PM IST

ನವದೆಹಲಿ: ಎಲೋನ್ ಮಸ್ಕ್ ನೇತೃತ್ವದ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಕಾರ್ಪ್ ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಮ್ಮತವಿಲ್ಲದ ಲೈಂಗಿಕತೆಯನ್ನು ಉತ್ತೇಜಿಸಿದ ಕಾರಣಕ್ಕಾಗಿ ಫೆಬ್ರವರಿ 26 ಮತ್ತು ಮಾರ್ಚ್ 25 ರ ನಡುವೆ ಭಾರತದಲ್ಲಿ 2,12,627 ಖಾತೆಗಳನ್ನು ನಿಷೇಧಿಸಿದೆ. ಅಲ್ಲದೆ ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ 1,235 ಖಾತೆಗಳನ್ನು ನಿಷೇಧಿಸಲಾಗಿದೆ. ಒಟ್ಟಾರೆಯಾಗಿ, ಎಕ್ಸ್ ದೇಶದಲ್ಲಿ ಈ ಅವಧಿಯಲ್ಲಿ 2,13,862 ಖಾತೆಗಳನ್ನು ನಿಷೇಧಿಸಿದೆ.

ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದ ಬಳಕೆದಾರರು 5,158 ದೂರು ಸಲ್ಲಿಸಿದ್ದಾರೆ ಎಂದು ಹೊಸ ಐಟಿ ನಿಯಮಗಳು, 2021 ಕ್ಕೆ ಅನುಸಾರ ಎಕ್ಸ್ ಪ್ರಕಟಿಸಿದ ತನ್ನ ಮಾಸಿಕ ವರದಿಯಲ್ಲಿ ಹೇಳಿದೆ. ಇದಲ್ಲದೆ ಖಾತೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ 86 ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

"ವಾಸ್ತವಿಕ ಅಂಶಗಳನ್ನು ಪರಿಶೀಲಿಸಿದ ನಂತರ ನಾವು 7 ಖಾತೆಗಳ ಅಮಾನತುಗಳನ್ನು ರದ್ದುಗೊಳಿಸಿದ್ದೇವೆ. ಇನ್ನು ದೂರು ಬಂದ ಉಳಿದ ಖಾತೆಗಳನ್ನು ಅಮಾನತುಗೊಳಿಸಲಾಗಿದೆ" ಎಂದು ಕಂಪನಿ ತಿಳಿಸಿದೆ. "ಈ ವರದಿಯ ಅವಧಿಯಲ್ಲಿ ಖಾತೆಗಳ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಸಂಬಂಧಿಸಿದ 29 ದೂರುಗಳನ್ನು ನಾವು ಸ್ವೀಕರಿಸಿದ್ದೇವೆ" ಎಂದು ಅದು ಹೇಳಿದೆ.

ಭಾರತದಿಂದ ಹೆಚ್ಚಿನ ದೂರುಗಳು ನಿಷೇಧ ತಪ್ಪಿಸಿಕೊಳ್ಳುವುದು (3,074), ಅಶ್ಲೀಲ ಕಂಟೆಂಟ್ (953), ದ್ವೇಷದ ನಡವಳಿಕೆ (412) ಮತ್ತು ನಿಂದನೆ / ಕಿರುಕುಳ (359) ಬಗ್ಗೆ ಸಂಬಂಧಿಸಿವೆ.

ಈ ಹಿಂದಿನ ವರದಿಯನ್ನು ನೋಡುವುದಾದರೆ ಜನವರಿ 26 ಮತ್ತು ಫೆಬ್ರವರಿ 25 ರ ನಡುವೆ ಎಕ್ಸ್ ಭಾರತದಲ್ಲಿ 5,06,173 ಖಾತೆಗಳನ್ನು ನಿಷೇಧಿಸಿತ್ತು. ಆ ಅವಧಿಯಲ್ಲಿ ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ 1,982 ಖಾತೆಗಳನ್ನು ನಿಷೇಧಿಸಲಾಗಿತ್ತು.

ಎಕ್ಸ್ (ಹಿಂದೆ ಟ್ವಿಟರ್) ಇದು ಆನ್​ಲೈನ್ ಸುದ್ದಿ ಮತ್ತು ಸಾಮಾಜಿಕ ನೆಟ್​ವರ್ಕಿಂಗ್ ಸೈಟ್ ಆಗಿದ್ದು, ಇದರ ಮೂಲಕ ಜನತೆ ಚಿಕ್ಕ ಗಾತ್ರದ ಸಂದೇಶಗಳನ್ನು ಪೋಸ್ಟ್​ ಮಾಡುತ್ತಾರೆ. ಈ ಪೋಸ್ಟ್​ ಗಳನ್ನು ಬೇರೆಯವರು ನೋಡಬಹುದು ಮತ್ತು ಅದಕ್ಕೆ ಪ್ರತಿಕ್ರಿಯಿಸಬಹುದು. ಎಕ್ಸ್​ ಇದು ಮೈಕ್ರೋಬ್ಲಾಗಿಂಗ್ ಪ್ಲಾಟ್ ಫಾರ್ಮ್​ನ ಒಂದು ಉದಾಹರಣೆಯಾಗಿದೆ. ಎಕ್ಸ್​ ಅನ್ನು ನೀವು ಪೋಸ್ಟರ್ ಅಥವಾ ರೀಡರ್ ಆಗಿ ಸುಲಭವಾಗಿ ಬಳಸಬಹುದು. ಇದರಲ್ಲಿ ಉಚಿತವಾಗಿ ಖಾತೆ ತೆರೆಯಬಹುದಾಗಿದೆ. ಜಾಗತಿಕವಾಗಿ ಸುದ್ದಿಗಳನ್ನು ಹಂಚಿಕೊಳ್ಳುವ ಪ್ರಮುಖ ಪ್ಲಾಟ್​ಫಾರ್ಮ್ ಆಗಿ ಎಕ್ಸ್​ ಹೊರಹೊಮ್ಮಿದೆ.

ಇದನ್ನೂ ಓದಿ : ಹೊಸ ಸ್ಯಾಮ್​ಸಂಗ್ ಕ್ರಿಸ್ಟಲ್ 4ಕೆ ಟಿವಿ ಬಿಡುಗಡೆ: ಬೆಲೆ ಎಷ್ಟು ಗೊತ್ತಾ? - SAMSUNG TV

For All Latest Updates

ABOUT THE AUTHOR

...view details