ಕರ್ನಾಟಕ

karnataka

ETV Bharat / technology

ಡೀಪ್​ಸೀಕ್ ಎಐ​ ಬಗ್ಗೆ ನಾನಾ ದೇಶಗಳ ಕಳವಳ: ಭಾರತ, ಅಮೆರಿಕದ ನಾಸಾ ಸೇರಿ ಎಲ್ಲಲ್ಲಿ ನಿಷೇಧ ಗೊತ್ತೇ? - DEEPSEEK AI BANNED

DeepSeek AI Banned: ಕೆಲ ದಿನಗಳ ಹಿಂದೆ ಪ್ರಪಂಚಾದ್ಯಂತ ಭಾರೀ ಸದ್ದು ಮಾಡಿದ್ದ ಡೀಪ್​ಸೀಕ್​ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿದ್ದು, ಹಲವೆಡೆ ನಿಷೇಧ ಕೂಡಾ ಮಾಡಲಾಗಿದೆ.

BANNED DEEPSEEK AI  COUNTRIES AND GOVT AGENCIES  DEEPSEEK BAN  DEEPSEEK AI NEWS
ಡೀಪ್​ಸೀಕ್ ಎಐ​ ಬಗ್ಗೆ ನಾನಾ ದೇಶಗಳ ಸರ್ಕಾರ ಕಳವಳ (Image Credit: AP News)

By ETV Bharat Tech Team

Published : Feb 5, 2025, 9:53 PM IST

DeepSeek AI Banned:ಚೀನಾದ ಸ್ಟಾರ್ಟಪ್​ ಕಂಪೆನಿ ಡೀಪ್​ಸೀಕ್​ ಈಗ ಮತ್ತೊಮ್ಮೆ ಭಾರೀ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದೆ ವಿಶ್ವವೇ ಬೆರಗುಗೊಳಿಸುವಂತೆ ಡೀಪ್​ಸೀಕ್​ ಎಐ ತಂತ್ರಜ್ಞಾನವನ್ನು ಪರಿಚಯಿಸಿತ್ತು. ಆದ್ರೆ ಇದೇ ಎಐ ತಂತ್ರಜ್ಞಾನದ ಬಗ್ಗೆ ಈಗ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಇದಕ್ಕೆ ಬಲವಾದ ಕಾರಣವೂ ಇದೆ.

ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಅನೇಕ ರಾಷ್ಟ್ರಗಳ ಸರ್ಕಾರಿ ಡಿವೈಸ್​ಗಳಲ್ಲಿ ಎಐ ಡೀಪ್​ಸೀಕ್​ ಅನ್ನು ನಿಷೇಧಿಸಲಾಗಿದೆ. ಭದ್ರತಾ ಅಪಾಯಗಳನ್ನು ಉಲ್ಲೇಖಿಸಿ ಕಠಿಣ ಕ್ರ ಕೈಗೊಳ್ಳಲಾಗಿದೆ. ಈ ನಿರ್ಣಯವನ್ನು ಮೊದಲು ಆಸ್ಟ್ರೇಲಿಯಾ ತೆಗೆದುಕೊಂಡಿತ್ತು. ನಂತರ ಭಾರತ, ಇಟಲಿ, ತೈವಾನ್ ಮತ್ತು ಅಮೆರಿಕ ದೇಶಗಳೂ ಸಹ ತಮ್ಮ ಸರ್ಕಾರಿ ಕಚೇರಿಗಳಲ್ಲಿ ಈ ಎಐ ಪ್ಲಾಟ್​ಫಾರ್ಮ್​ ಬಳಸದಂತೆ ನಿಷೇಧಿಸಿವೆ. ಯುರೋಪ್ ಮತ್ತಿತರ ದೇಶಗಳಲ್ಲಿ ಡೀಪ್‌ಸೀಕ್‌ನ ಭದ್ರತಾ ಅಪಾಯಗಳ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿರುವುದು ಗಮನಾರ್ಹ.

ಅನೇಕ ಸರ್ಕಾರಗಳು ಡೀಪ್​ಸೀಕ್​ ನಿಷೇಧಿಸಲು ಸಿದ್ಧತೆ ನಡೆಸುತ್ತಿವೆ. ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾ ಸರ್ಕಾರಿ ಸಾಧನಗಳಲ್ಲಿ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ನಿಷೇಧಿಸಿತ್ತು. ಈಗ ಡೀಪ್‌ಸೀಕ್ ನಿಷೇಧಿಸುವ ಮೂಲಕ ಆಸ್ಟ್ರೇಲಿಯಾ ತನ್ನ ಸೈಬರ್ ಭದ್ರತಾ ನೀತಿಯನ್ನು ಮತ್ತಷ್ಟು ಬಿಗಿಗೊಳಿಸಿದೆ.

ಎಲ್ಲಾ ಸರ್ಕಾರಿ ಘಟಕಗಳಿಗೆ ಡೀಪ್‌ಸೀಕ್‌ನ ಉತ್ಪನ್ನಗಳು, ಅಪ್ಲಿಕೇಶನ್‌ಗಳು ಮತ್ತು ವೆಬ್ ಸೇವೆಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಮತ್ತು ಈ ಸೇವೆಗಳು ಈಗಾಗಲೇ ಅಸ್ತಿತ್ವದಲ್ಲಿರುವಲ್ಲೆಲ್ಲಾ ತಕ್ಷಣವೇ ತೆಗೆದುಹಾಕುವಂತೆ ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.

ಗೃಹ ವ್ಯವಹಾರಗಳ ಸಚಿವ ಟೋನಿ ಬರ್ಕ್ ಮಾತನಾಡಿ, ಸರ್ಕಾರದ ತಾಂತ್ರಿಕ ಭದ್ರತೆಗೆ ಡೀಪ್‌ಸೀಕ್ ಸ್ವೀಕಾರಾರ್ಹವಲ್ಲದ ಅಪಾಯ ಒಡ್ಡುತ್ತದೆ. ಹೀಗಾಗಿ ನಾವು ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವಾದ ಹೆಜ್ಜೆಯೊಂದು ಮುಂದಕ್ಕೆ ಇಡುತ್ತಿದ್ದೇವೆ ಎಂದು ಹೇಳಿದರು. ಆದ್ರೆ ಈ ನಿರ್ಬಂಧವು ಸರ್ಕಾರಿ ವ್ಯವಸ್ಥೆಗಳು ಮತ್ತು ಸಲಕರಣೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ನಾಗರಿಕರ ಡಿವೈಸ್​ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಇದನ್ನೂ ಓದಿ:'ಸರ್ಕಾರಿ ಕೆಲಸಗಳಿಗೆ ChatGPT, DeepSeek ಬಳಸಬೇಡಿ': ಹಣಕಾಸು ಸಚಿವಾಲಯ ಸುತ್ತೋಲೆ

ಸಂಚಲನ ಸೃಷ್ಟಿಸಿದ ಡೀಪ್‌ಸೀಕ್: ಕಳೆದ ತಿಂಗಳು ಬಿಡುಗಡೆಯಾದಾಗಿನಿಂದ ಡೀಪ್‌ಸೀಕ್ ಸುದ್ದಿಯಲ್ಲಿದೆ. ಇದು ಅಮೆರಿಕದ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್‌ಲೋಡ್ ಮಾಡಲಾದ ಉಚಿತ ಅಪ್ಲಿಕೇಶನ್ ಆಗಿದೆ. ಚಾಟ್​ಜಿಪಿಟಿಗೆ ಡೀಪ್‌ಸೀಕ್ ಕಠಿಣ ಸ್ಪರ್ಧೆ ನೀಡುತ್ತಿದೆ. ಈ ಎಐ ಮಾದರಿಯು ಅದರ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಅಗ್ಗವಾಗಿದೆ. ಅಷ್ಟೇ ಅಲ್ಲ, ಇದು ಪಾಶ್ಚಿಮಾತ್ಯ ದೇಶಗಳ ಚಿಪ್ ತಯಾರಕರು ಮತ್ತು ಡೇಟಾ ಕೇಂದ್ರಗಳಲ್ಲಿ ಮಾಡಿದ ಭಾರೀ ಹೂಡಿಕೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಎಚ್ಚರಿಕೆಯಿಂದ ಬಳಸಿ:ಅನೇಕ ಪ್ರಮುಖ ಎಐ ತಜ್ಞರು ಡೀಪ್​ಸೀಕ್​ ಎಐ ಬಗ್ಗೆ ಬಳಕೆದಾರರು ಎಚ್ಚರವಹಿಸುವಂತೆ ಹೇಳಿದ್ದಾರೆ. ಜೊತೆಗೆ, ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕೆಂದು ಸಲಹೆ ನೀಡಿದ್ದಾರೆ. ಡೀಪ್‌ಸೀಕ್‌ನಲ್ಲಿ ದಾಖಲಾಗಿರುವ ದತ್ತಾಂಶವು ಚೀನಾ ಸರ್ಕಾರಕ್ಕೆ ಲಭ್ಯವಾಗಬಹುದು, ಇದು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂಬುದು ತಜ್ಞರ ಸಲಹೆ.

ಯುಎನ್​ ತಜ್ಞರು: ಯುಎನ್ ಎಐ ಸಲಹೆಗಾರರಾದ ಡೇಮ್ ವೆಂಡಿ ಹಾಲ್ ಡೀಪ್‌ಸೀಕ್‌ನ ಸಂಭಾವ್ಯ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ. ನೀವು ಚೀನೀ ತಂತ್ರಜ್ಞಾನ ಕಂಪೆನಿಯಾಗಿದ್ದರೆ ಮತ್ತು ಮಾಹಿತಿಗೆ ಸಂಬಂಧಿತ ಕೆಲಸವನ್ನು ಮಾಡುತ್ತಿದ್ದರೆ, ನೀವು ಚೀನಾ ಸರ್ಕಾರದ ನಿಯಮಗಳಿಗೆ ಒಳಪಟ್ಟಿರುತ್ತೀರಿ. ಕಂಪೆನಿಗಳು ಸರ್ಕಾರದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಬದ್ಧವಾಗಿರುತ್ತವೆ. ಡೀಪ್‌ಸೀಕ್‌ನಂತಹ ಕಂಪನಿಗಳು ಚೀನಾ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ. ಇದು ಬಳಕೆದಾರರ ಡೇಟಾದ ಗೌಪ್ಯತೆಯನ್ನು ಪ್ರಶ್ನಿಸುತ್ತದೆ ಎಂದು ಹೇಳಿದ್ದಾರೆ.

ಅಮೆರಿಕ:ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಅಮೆರಿಕದಲ್ಲಿ ಹಲವಾರು ಫೆಡರಲ್ ಏಜೆನ್ಸಿಗಳು DeepSeek ಪ್ರವೇಶಿಸದಂತೆ ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿವೆ ಮತ್ತು ನೂರಾರು ಕಂಪೆನಿಗಳು Netskope ಮತ್ತು Armis ನಂತಹ ತಮ್ಮ ಉದ್ಯಮ ಸೈಬರ್ ಭದ್ರತಾ ಸಂಸ್ಥೆಗಳಿಗೆ ಅಪ್ಲಿಕೇಶನ್‌ಗೆ ಪ್ರವೇಶವನ್ನು ನಿರ್ಬಂಧಿಸಲು ವಿನಂತಿಸಿವೆ.

ನಾಸಾ:ಡೀಪ್‌ಸೀಕ್ ಮತ್ತು ಅದರ ಉತ್ಪನ್ನಗಳು, ಸೇವೆಗಳನ್ನು ನಾಸಾದ ಡೇಟಾ ಮತ್ತು ಮಾಹಿತಿಯೊಂದಿಗೆ ಅಥವಾ ಸರ್ಕಾರ ನೀಡುವ ಸಾಧನಗಳು ಮತ್ತು ನೆಟ್‌ವರ್ಕ್‌ಗಳಲ್ಲಿ ಬಳಸಲು ಅಧಿಕೃತಗೊಳಿಸಲಾಗಿಲ್ಲ. ಮಾಧ್ಯಮ ಪ್ರಕಾರ, ನಾಸಾ ಸಾಧನಗಳು ಮತ್ತು ಏಜೆನ್ಸಿ-ನಿರ್ವಹಿಸುವ ನೆಟ್‌ವರ್ಕ್ ಸಂಪರ್ಕಗಳ ಮೂಲಕ ಡೀಪ್‌ಸೀಕ್ ಅನ್ನು ಪ್ರವೇಶಿಸಲು ಉದ್ಯೋಗಿಗಳಿಗೆ ಅಧಿಕಾರವಿಲ್ಲ ಎಂದು ವರದಿ ಮಾಡಿವೆ.

ಚಾಟ್​ಜಿಪಿಟಿಯಂತಹ ಪ್ರತಿಸ್ಪರ್ಧಿಗಳ ಪ್ರಗತಿಯನ್ನು ಆಧರಿಸಿ ಡೀಪ್​ಸೀಕ್​ನ ಇತ್ತೀಚಿನ ಎಐ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಮೆರಿಕದ ಕಂಪೆನಿಗಳು ಮತ್ತು ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಚಾಟ್​ಜಿಪಿಟಿಯಂತಹ ಜನಪ್ರಿಯ ಉತ್ಪನ್ನಗಳ ಕಡೆಗೆ ಸಣ್ಣ ಪ್ರಮಾಣದ ದಟ್ಟಣೆಯನ್ನು ಪತ್ತೆ ಹಚ್ಚುವುದು ಕಷ್ಟಕರವಾದ ಕಾರಣ ಈ ರೀತಿಯಾಗಿ ಮಾಡುವುದನ್ನು ಸ್ಟಾರ್ಟಪ್ ತಡೆಯುವುದು ಕಷ್ಟಕರ ಎಂದು ವರದಿಯಾಗಿದೆ.

ಇದನ್ನೂ ಓದಿ:ಚೀನಾದ DeepSeek ತರಬೇತಿಗೆ Chat GPT ಡೇಟಾ ಕಳವು ಶಂಕೆ: ತನಿಖೆಗೆ ಮುಂದಾದ OpenAI

ABOUT THE AUTHOR

...view details