ಹೈದರಾಬಾದ್: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಲಭ್ಯವಾಗುವಂತೆ ಮಾಡುತ್ತಲೇ ಬರುತ್ತಿದೆ. ಇದೀಗ ಮತ್ತೊಂದು ಹೊಸ ಪೀಚರ್ವೊಂದನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇಂಟರ್‌ನೆಟ್ ಇಲ್ಲದಿದ್ದರೂ ಫೋಟೋ, ವಿಡಿಯೋ ಮತ್ತು ಫೈಲ್‌ಗಳನ್ನು ಹಂಚಿಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ಲಭ್ಯವಾಗಲಿದೆ. ಇದರರ್ಥ ನೀವು ಇನ್ನು ಮುಂದೆ ನೆಟ್‌ವರ್ಕ್‌ಗೆ ಸಂಪರ್ಕಿಸದೆಯೇ ನಿಮ್ಮ ಡಾಕ್ಯುಮೆಂಟ್‌ಗಳನ್ನು ನಿಮಗೆ ಬೇಕಾದವರಿಗೆ ಕಳುಹಿಸಬಹುದು.
ಸಾಮಾನ್ಯವಾಗಿ, ನೆಟ್‌ವರ್ಕ್ ಸೌಲಭ್ಯ ಇಲ್ಲದಿದ್ದರೂ, ಬ್ಲೂಟೂತ್ ಸಹಾಯದಿಂದ ಶೇರ್ ಇಟ್ ಮತ್ತು ನಿಯರ್ ಬೈ ಶೇರ್‌ನಂತಹ ಅಪ್ಲಿಕೇಶನ್‌ಗಳ ಮೂಲಕ ಫೋಟೋಗಳು ಮತ್ತು ಚಲನಚಿತ್ರಗಳನ್ನು ಕಳುಹಿಸಬಹುದಾಗಿದೆ. ಆದರೆ ಆ ಯಾವ ಆ್ಯಪ್ಗಳು ಇಲ್ಲದೇ ನಿಮ್ಮ ವಾಟ್ಸ್ಆ್ಯಪ್ ಮೂಲಕವೇ ನಿಮ್ಮ ಮೊಬೈಲ್ನಲ್ಲಿರುವ ಪೈಲ್ಗಳು ಅಥವಾ ಫೋಟೋಗಳನ್ನು ವಾಟ್ಸ್ಆ್ಯಪ್ ಮೂಲಕವೇ ಇಂಟರ್ನೆಟ್ ಇಲ್ಲದೇ ಆರಾಮಾಗಿ ರವಾನೆ ಮಾಡಬಹುದು. ವಾಟ್ಸ್ಆ್ಯಪ್ ಇಂತಹ ಸೇವೆಗಳನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲು ಪ್ರಾಯೋಗಿಕ ಪರೀಕ್ಷೆ ಮಾಡುತ್ತಿದೆ. ಬೀಟಾ ವರ್ಷನ್ ಮೂಲಕ ಈಗಾಗಲೇ ಈ ಸೇವೆ ಆರಂಭಿಸಿದೆ. ವಾಟ್ಸ್ಆ್ಯಪ್ ತರಲಿರುವ ಈ ವೈಶಿಷ್ಟ್ಯವು ಡಾಕ್ಯುಮೆಂಟ್‌ಗಳನ್ನು ಹೆಚ್ಚು ವೇಗವಾಗಿ ಮತ್ತು ಸುರಕ್ಷಿತವಾಗಿ ಕಳುಹಿಸಲು ಸಹಾಯ ಮಾಡಲಿದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ನೀವು WhatsApp ಸಿಸ್ಟಮ್ ಫೈಲ್ ಮತ್ತು ಫೋಟೋ ಗ್ಯಾಲರಿ ಪ್ರವೇಶದಂತಹ ಅನುಮತಿಗಳನ್ನು ನೀಡಬೇಕಾಗುತ್ತದೆ.
ಸ್ವಲ್ಪ ಹತ್ತಿರ ಇದ್ದು ಶೇರ್ ಮಾಡಬೇಕು:ನೀವು ಕಳುಹಿಸಲು ಬಯಸುವ ವ್ಯಕ್ತಿಯು ಮೊಬೈಲ್ ಬ್ಲೂಟೂತ್ ಸಂಪರ್ಕವನ್ನು ಹೊಂದಲು ಸಾಕಷ್ಟು ಹತ್ತಿರದಲ್ಲಿದ್ದರೆ ಮಾತ್ರ ಆಫ್‌ಲೈನ್ ಹಂಚಿಕೆ ಸಾಧ್ಯ. ಬ್ಲೂಟೂತ್ ಆನ್ ಮಾಡಿ ಮತ್ತು ಹತ್ತಿರದ WhatsApp ಬಳಕೆದಾರರ ಸಾಧನವನ್ನು ಪತ್ತೆ ಮಾಡಿ ಮತ್ತು ಫೈಲ್ ಅನ್ನು ಕಳುಹಿಸಿ. ಇನ್ನೊಬ್ಬ ವ್ಯಕ್ತಿ ಅನುಮತಿ ನೀಡಿದರೆ ಮಾತ್ರ ಈ ರೀತಿಯ ಹಂಚಿಕೆ ಸಾಧ್ಯ. ಬೇಡವೆಂದರೂ ಆಫ್ ಮಾಡುವ ಸೌಲಭ್ಯ ಕೂಡಾ ಹೊಸ ವೈಶಿಷ್ಟ್ಯದಲ್ಲಿ ಇದೆ. ಪ್ರಸ್ತುತ ಈ ವೈಶಿಷ್ಟ್ಯವು ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಿಗುವ ಸಾಧ್ಯತೆ ಇದೆ.