ಹೈದರಾಬಾದ್:ಜನಪ್ರಿಯ ಮೈಕ್ರೋಬ್ಲಾಗಿಂಗ್ ಆಗಿರುವ ವಾಟ್ಸ್‌ಆ್ಯಪ್ ಅತಿದೊಡ್ಡ ಚಾಟಿಂಗ್ ವೇದಿಕೆಯೂ ಹೌದು. ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. ಅಂಥದ್ದೇ ಮಹತ್ವದ ಇನ್ನೊಂದು ಬದಲಾವಣೆಗೆ ಆ್ಯಪ್ ಸಜ್ಜಾಗುತ್ತಿದೆ.
ನಿಜ, ಬಳಕೆದಾರರ ಸ್ನೇಹಿಯಾಗಿರುವ ವಾಟ್ಸ್‌ಆ್ಯಪ್ ಒಳ್ಳೆಯ ಸುದ್ದಿಯನ್ನು ಹೊರತಂದಿದೆ. ಅದೇನೆಂದರೆ, ಇನ್ನು ಮುಂದೆ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವ ಜನರು ಸ್ಟೋರಿ ಅಥವಾ ಸ್ಟೇಟಸ್ ಹಾಕಿಕೊಂಡಾಗ ಅದನ್ನು ತಿಳಿಸುವ ನೋಟಿಫಿಕೇಶನ್ ನಮಗೆ ರವಾನೆಯಾಗಲಿದೆ. ಇದರಿಂದ ಯಾರಾದರೂ ಹೊಸದಾಗಿ ಸ್ಟೇಟಸ್ ಹಾಕಿದಲ್ಲಿ ಅದು ನಮಗೆ ತಿಳಿದುಬರಲಿದೆ. ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಕುರಿತು ಶೋಧಗಳು ನಡೆಯುತ್ತಿವೆ.
ಏನು ಲಾಭ?:ವಾಟ್ಸ್ಆ್ಯಪ್ನಲ್ಲಿ ಅಳವಡಿಸಿಕೊಳ್ಳಲು ಉದ್ದೇಶಿಸಿರುವ ನೋಟಿಫಿಕೇಶನ್ ವೈಶಿಷ್ಟ್ಯವು ಹಲವು ವಿಧದಲ್ಲಿ ಬಳಕೆದಾರರಿಗೆ ನೆರವಾಗಲಿದೆ. ಇದನ್ನು ಅಭಿವೃದ್ಧಿಪಡಿಸುವ ಹಂತದಲ್ಲಿ ಮೆಟಾ ತಾಂತ್ರಿಕವಾಗಿ ಶೋಧ ನಡೆಸುತ್ತಿದೆ. ಇದರ ಅಳವಡಿಕೆಯ ಬಳಿಕ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿರುವವರು ಸ್ಟೇಟಸ್ ಅಪ್‌ಡೇಟ್ ಮಾಡಿದಲ್ಲಿ ಅದರ ಮಾಹಿತಿಯು ನೋಟಿಫಿಕೇಶನ್ ಮೂಲಕ ಇನ್ನೊಬ್ಬ ಬಳಕೆದಾರರ ಗಮನಕ್ಕೆ ಬರುತ್ತದೆ. ಈ ಮೊದಲು ಯಾರೇ ಸ್ಟೇಟಸ್ ಹಾಕಿಕೊಂಡಲ್ಲಿ ಅದು ನಾವು ಅದನ್ನು ನೋಡುವ ಹೊರತು ಗಮನಕ್ಕೆ ಬರುವುದಿಲ್ಲ.