ನವದೆಹಲಿ: ದೇಶ ಮಾತ್ರವಲ್ಲದೇ ಜಾಗತಿಕವಾಗಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸ್ಆ್ಯಪ್ ಸದಾ ಒಂದಲ್ಲ ಒಂದು ಹೊಸ ಫೀಚರ್ಗಳನ್ನು ಒದಗಿಸುತ್ತಲೇ ಇರುತ್ತದೆ. ಇದೀಗ ಮೆಟಾ ಪ್ಲಾಟ್ಫಾರ್ಮ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಬುಧವಾರ ವಾಟ್ಸ್ಆ್ಯಪ್ ಕಮ್ಯೂನಿಟಿ ನವೀಕರಣದ ಬಗ್ಗೆ ಮತ್ತೊಂದು ಘೋಷಣೆ ಮಾಡಿದ್ದಾರೆ. ಈ ಅಪ್ಗ್ರೇಡ್ ಗುಂಪು ಸಂವಹನ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಈ ಹೊಸ ವೈಶಿಷ್ಟ್ಯದಲ್ಲಿ WhatsApp ಕಮ್ಯೂನಿಟಿ ಗ್ರೂಪ್ಗಳಲ್ಲಿ ಈವೆಂಟ್‌ಗಳನ್ನು ರಚಿಸಬಹುದಾಗಿದೆ ಮತ್ತು ಕಮ್ಯೂನಿಟಿ ಸದಸ್ಯರು ಗ್ರೂಪ್ ಅಡ್ಮಿನ್ ಅನೌನ್ಸ್ಮೆಂಟ್ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ.
ಮಾರ್ಕ್ ಜುಕರ್‌ಬರ್ಗ್ ತಮ್ಮ ವಾಟ್ಸ್ಆ್ಯಪ್ ಚಾನೆಲ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, "WhatsApp ಕಮ್ಯೂನಿಟಿಯಲ್ಲಿದ್ದರೆ ನೀವು ಈವೆಂಟ್ಸ್ಗಳನ್ನು ರಚಿಸಬಹುದಾಗಿದೆ ಹಾಗೂ ನಿರ್ವಾಹಕ (Admin) ಪ್ರಕಟಣೆಗಳಿಗೆ ಪ್ರತಿಕ್ರಿಯಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರೂಪ್ಗಳು ಈವೆಂಟ್‌ಗಳನ್ನು ರಚಿಸಲು ಸುಲಭವಾಗಲಿದೆ ಎಂದು ತಿಳಿಸಿದ್ದಾರೆ.