ಕರ್ನಾಟಕ

karnataka

ETV Bharat / technology

ಮೊಬೈಲ್​ನಲ್ಲಿನ ಡೇಟಾ ಕಳುವಾಗಬಾರದೇ?: ಹಾಗಿದ್ರೆ ಈ ಆ್ಯಂಡ್ರಾಯ್ಡ್​​ 'ಲಾಕ್​​ಡೌನ್​ ಮೋಡ್​​' ಬಳಸಿ - lockdown mode - LOCKDOWN MODE

Lock Down Mode Android: ಮೊಬೈಲ್​ ಬಳಕೆದಾರರ ಮೇಲೆ ಸೈಬರ್ ದಾಳಿಗಳು ಹೆಚ್ಚಾಗಿವೆ. ಇದನ್ನು ತಪ್ಪಿಸಲು ಗೂಗಲ್, ಬಳಕೆದಾರರಿಗೆ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದೇನೆಂದರೆ, ಆಂಡ್ರಾಯ್ಡ್ ಲಾಕ್ ಡೌನ್ ಮೋಡ್‌. ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅದರ ಪ್ರಯೋಜನಗಳೇನು ಎಂಬುದು ಇಲ್ಲಿದೆ.

ಲಾಕ್​​ಡೌನ್​ ಮೋಡ್
ಲಾಕ್​​ಡೌನ್​ ಮೋಡ್ (ETV Bharat)

By ETV Bharat Karnataka Team

Published : Jul 23, 2024, 9:10 PM IST

ಹೈದರಾಬಾದ್​:ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಮೊಬೈಲ್​ ಬಳಕೆದಾರರ ಮೇಲೆ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಸೈಬರ್ ಕಳ್ಳರು ಫೋನ್‌ನಿಂದ ವೈಯಕ್ತಿಕ ಡೇಟಾ, ಫೈಲ್‌ಗಳು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕದಿಯುತ್ತಿದ್ದಾರೆ. ಬ್ಯಾಂಕ್​ನಿಂದ ಹಣ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಮೊಬೈಲ್​ನಲ್ಲಿ ಬ್ಯಾಂಕ್​ ಖಾತೆ ನಿರ್ವಹಿಸಲು ಭಯವಾಗುತ್ತದೆ. ಆದರೆ, ಇದಕ್ಕೆ ನಮ್ಮ ಮೊಬೈಲ್​ನಲ್ಲಿ ಭದ್ರತಾ ವ್ಯವಸ್ಥೆ ಇದೆ ಎಂಬುದು ನಿಮಗೆ ಗೊತ್ತೇ?.

ಹೌದು, ಮೊಬೈಲ್​ ಅನ್ನು ನಾವು ಸೈಬರ್​ ಕಳ್ಳರ ಕೈಗೆ ಸಿಗದಂತೆ ರಕ್ಷಿಸಿಕೊಳ್ಳಬಹುದು. ಹೇಗಂತೀರಾ?, ಆಂಡ್ರಾಯ್ಡ್ ಲಾಕ್‌ಡೌನ್ ಮೋಡ್. ಈ ವಿಧಾನವನ್ನು ಬಳಸುವ ಮೂಲಕ ಸೈಬರ್ ದಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಸಾಮಾನ್ಯವಾಗಿ, ಪಿನ್ ಸಂಖ್ಯೆ, ಪಾಸ್‌ವರ್ಡ್, ಪ್ಯಾಟರ್ನ್ ಗೊತ್ತಿಲ್ಲ ಎಂದಾದಲ್ಲಿ ಫೋನ್ ಅನ್ನು ಬಳಸಲು ಅಸಾಧ್ಯ. ಇನ್ನು ಡೇಟಾ ಕದಿಯುವುದು ದೂರದ ಮಾತು. ಹಾಗೊಂದು ವೇಳೆ ಮಾಹಿತಿ ಇತ್ತು ಎಂದಾದರೂ, ಈ ಲಾಕ್‌ಡೌನ್ ಮೋಡ್ ಅನ್ನು ಆನ್ ಮಾಡಿದರೆ, ಮೊಬೈಲ್​​ನ ಆಳಕ್ಕೆ ಇಳಿಯಲು ಸಾಧ್ಯವೇ ಇಲ್ಲ.

ಒಮ್ಮೆ ಈ ಮೋಡ್​ ಮೊಬೈಲ್​ನಲ್ಲಿ ಆನ್​ ಮಾಡಿದರೆ, ಎಲ್ಲಾ ಬಯೋಮೆಟ್ರಿಕ್ ಅನ್‌ಲಾಕಿಂಗ್ ಕಾರ್ಯವಿಧಾನಗಳು ಸ್ವಯಂ ಆಫ್ ಆಗುತ್ತವೆ. ಆಗ ನಿಮ್ಮ ಫೋನ್ ಸುರಕ್ಷಿತವಾಗಿರುತ್ತದೆ. ಹಾಗಾದರೆ ನಿಮ್ಮ ಫೋನ್‌ನಲ್ಲಿ ಡೇಟಾವನ್ನು ಸುರಕ್ಷಿತವಾಗಿಡಲು ಲಾಕ್‌ಡೌನ್ ಮೋಡ್ ಅನ್ನು ಹೇಗೆ ಬಳಸುವುದು? ಇದು ಹೇಗೆ ಕೆಲಸ ಮಾಡುತ್ತದೆ? ಎಂಬುದರ ವಿವರ ತಿಳಿಯೋಣ.

ಈ ಪ್ರಕ್ರಿಯೆಗಳನ್ನು ಪಾಲಿಸಿ:ನಿಮ್ಮ ಮೊಬೈಲ್​ನ ಸೆಟ್ಟಿಂಗ್​ಗೆ ಹೋಗಿ, ಅಲ್ಲಿ ನೀವು ಅನ್​​ಲಾಕ್​ ಮೋಡ್​ ಎಂದು ಸರ್ಚ್​ ಮಾಡಬೇಕು. ಬಳಿಕ ಅಲ್ಲಿನ ಅನ್​ಲಾಕ್​ ಮೋಡ್​ ಅನ್ನು ಆನ್​ ಮಾಡಬೇಕು. ಬಳಿಕ ಇದು ನಿಮ್ಮ ಮೊಬೈಲ್​ ಅನ್ನು ಸೆಕ್ಯೂರಿಟಿ ಮೋಡ್​ಗೆ ಹಾಕುತ್ತದೆ. ಅಂದರೆ, ಭದ್ರತಾ ಕವಚ ಆರಂಭವಾದಂತೆ. ಈ ಮೋಡ್​ ಆರಂಭಿಸಿದ ಬಳಿಕ, ನಿಮ್ಮ ಮೊಬೈಲ್​ ಅನ್ನು ಯಾರಾದರೂ ತೆಗೆದುಕೊಂಡು ಅಥವಾ ಹ್ಯಾಕ್​ ಮಾಡಿ ಡೇಟಾ ಹುಡುಕಿದೆ, ತಕ್ಷಣವೇ ಲಾಕ್‌ಡೌನ್ ಮೋಡ್ ಸಕ್ರಿಯವಾಗುತ್ತದೆ.

ಫೋನ್ ಕಳ್ಳತನವಾದಾಗ ಫೋನ್​ನಲ್ಲಿನ ಅನ್​ಲಾಕ್ ಮೋಡ್​​ನಿಂದಾಗಿ ಮೊಬೈಲ್​ ಬಳಸಲು ಸಾಧ್ಯವಾಗುವುದಿಲ್ಲ. ಈ ವೇಳೆ, ನೀವು ಫೋನ್​​ನ IMEI ಸಂಖ್ಯೆಯನ್ನು ನಿರ್ಬಂಧಿಸಬಹುದು. ಫೋನ್ ಅನ್ನು ಸಕ್ರಿಯಗೊಳಿಸಿದ ನಂತರ ಅದನ್ನು ಅನ್‌ಲಾಕ್ ಮಾಡುವುದರಿಂದ ಸ್ವಯಂಚಾಲಿತವಾಗಿ ಲಾಕ್‌ಡೌನ್ ಮೋಡ್ ಆಫ್ ಆಗುತ್ತದೆ. ಫೋನ್​ ಆನ್​ ಮಾಡಲು ಬಯೋಮೆಟ್ರಿಕ್ ದೃಢೀಕರಣ ಕೇಳುತ್ತದೆ. ಒಂದು ವೇಳೆ ಇದು ಬೇಡವೆಂದಾದಲ್ಲಿ ಫೋನ್ ಸೆಟ್ಟಿಂಗ್‌ನಲ್ಲಿ ಲಾಕ್‌ಡೌನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಬಹುದು. ಲಾಕ್ ಡೌನ್ ಮೋಡ್ ಫೋನ್ ಮಾದರಿ ಮತ್ತು ಆಂಡ್ರಾಯ್ಡ್ ಆವೃತ್ತಿಯನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಲಾಕ್‌ಡೌನ್ ಮೋಡ್ ಕೆಲವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.

ಲಾಕ್‌ಡೌನ್ ಮೋಡ್ ನಿಮ್ಮ ಫೋನ್‌ಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ. ಈ ವೈಶಿಷ್ಟ್ಯವನ್ನು ಫೋನ್‌ನಲ್ಲಿ ಸುಲಭವಾಗಿ ಸಕ್ರಿಯಗೊಳಿಸಬಹುದು. ಪವರ್ ಬಟನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು. ಫೋನ್ ಲಾಕ್‌ಡೌನ್ ಮೋಡ್‌ನಲ್ಲಿರುವಾಗ ಯಾರಾದರೂ ನಿಮಗೆ ಕರೆ ಮಾಡಿದರೆ, ನೀವು ಅದನ್ನು ಸ್ವೀಕರಿಸಬಹುದು. ಫ್ಲ್ಯಾಶ್‌ಲೈಟ್ ಮತ್ತು ಕ್ಯಾಮೆರಾದಂತಹ ಲಾಕ್​ಸ್ಕ್ರೀನ್ ಶಾರ್ಟ್‌ಕಟ್‌ಗಳನ್ನು ಬಳಸಬಹುದು. Realme ಮತ್ತು Oppo ನಂತಹ ಫೋನ್‌ಗಳಲ್ಲಿ ಈ ವೈಶಿಷ್ಟ್ಯವು ಇರುವುದಿಲ್ಲ.

ಇದನ್ನು ಓದಿ:ಮೊಬೈಲ್ ಪ್ರಿಯರಿಗೆ ಗುಡ್​ ನ್ಯೂಸ್: ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.15ಕ್ಕೆ ಇಳಿಕೆ - centre cuts customs duty

ABOUT THE AUTHOR

...view details