ಹೈದರಾಬಾದ್: 10 Incredibly Useful Websites :ಇಂದಿನ ಕಾಲದಲ್ಲಿ ಮಾಹಿತಿಯೇ ಸಂಪತ್ತು (Information is Wealth). ಅದಕ್ಕಾಗಿಯೇ ನಾವು ನಮಗೆ ಬೇಕಾದ ಸರಿಯಾದ ಮಾಹಿತಿಗಾಗಿ ಇಂಟರ್ನೆಟ್‌ನಲ್ಲಿ ಹುಡುಕುತ್ತೇವೆ. ಆದರೆ ಕೆಲವೊಮ್ಮೆ ಎಷ್ಟೇ ಹುಡುಕಿದರೂ ನಮಗೆ ಬೇಕಾದ ಸರಿಯಾದ ಮಾಹಿತಿ ಸಿಗದೇ ಹೋಗಬಹುದು. ಅದಕ್ಕಾಗಿಯೇ ಈ ಲೇಖನದಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸುವ ಟಾಪ್-10 ವೆಬ್‌ಸೈಟ್‌ಗಳ ಬಗ್ಗೆ ತಿಳಿಸಲು ಪ್ರಯತ್ನಿಸಿದ್ದೇವೆ.
1. Honey:ಹನಿ ಎಂಬುದು ಪೇಪಾಲ್ ಒಡೆತನದ ವೆಬ್‌ಸೈಟ್. ಇದು ಎಲ್ಲ ರೀತಿಯ ಕೂಪನ್ ಕೋಡ್‌ಗಳು ಮತ್ತು ರಿಯಾಯಿತಿಗಳನ್ನು ಒಳಗೊಂಡಿದೆ. ಹಾಗಾಗಿ ಶಾಪಿಂಗ್ ಪ್ರಿಯರಿಗೆ ಇದು ತುಂಬಾ ಉಪಯುಕ್ತವಾಗಿದೆ. ಈ ಹನಿ ಸೈಟ್‌ನಲ್ಲಿ ಕೂಪನ್ ಕೋಡ್‌ಗಳನ್ನು ಬಳಸುವ ಮೂಲಕ ನಿಮಗೆ ಬೇಕಾದುದನ್ನು ಉತ್ತಮ ರಿಯಾಯಿತಿಯಲ್ಲಿ ನೀವು ಖರೀದಿಸಬಹುದು.
2. Have I Been Pwned?:ಇಂದು, ಗುರುತಿನ ಕಳ್ಳತನ ಮತ್ತು ಡಿಜಿಟಲ್ ಡೇಟಾ ಸೋರಿಕೆಗಳು ಆಘಾತಕಾರಿ ಪ್ರಮಾಣದಲ್ಲಿ ಹೆಚ್ಚಳ ಕಾಣುತ್ತಿವೆ. ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಡೇಟಾ ಸೋರಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಈ ಹ್ಯಾವ್ ಐ ಬೀನ್ ಪನ್ಡ್ ವೆಬ್‌ಸೈಟ್ ತುಂಬಾ ಉಪಯುಕ್ತವಾಗಿದೆ.
3. WeTransfer:ನಾವು ಕುಟುಂಬದ ಫೋಟೋಗಳು ಮತ್ತು ವಿಡಿಯೋಗಳನ್ನು ನಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಆನ್‌ಲೈನ್‌ನಲ್ಲಿ ಕಳುಹಿಸಬೇಕು. ಆದರೆ, ಅವು ಗಾತ್ರದಲ್ಲಿ ಬಹಳ ದೊಡ್ಡದಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ VeTransfer ಸೂಕ್ತವಾಗಿದೆ. ನಿಮ್ಮ ಎಲ್ಲಾ ಫೈಲ್‌ಗಳನ್ನು ಕಳುಹಿಸಲು ಈ ವೆಬ್‌ಸೈಟ್ ಡೌನ್‌ಲೋಡ್ ಲಿಂಕ್ ಅನ್ನು ರಚಿಸುತ್ತದೆ. ಅದನ್ನು ನಿಮ್ಮ ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸಬಹುದಾಗಿದೆ.
4. Adobe Acrobat PDF Filler:PDF ಫೈಲ್ ಅನ್ನು ಎಡಿಟ್ ಮಾಡಬೇಕಾದರೆ ನೀವು ಪ್ರೊ ಆವೃತ್ತಿಯನ್ನು ಪಡೆಯಬೇಕು. ಆದರೆ, ನೀವು ಅಡೋಬ್ ಅಕ್ರೋಬ್ಯಾಟ್ ಪಿಡಿಎಫ್ ಫಿಲ್ಲರ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಬಳಸಬಹುದು. ಇದಕ್ಕಾಗಿ ನೀವು ಉಚಿತ ಅಡೋಬ್ ಖಾತೆಯನ್ನು ರಚಿಸಬೇಕಾಗಿದೆ. ಈ ಖಾತೆಯನ್ನು ರಚಿಸಿದ ನಂತರ ನೀವು Adobe PDF ಅನ್ನು ಉಚಿತವಾಗಿ ಎಡಿಟ್ ಮಾಡಬಹುದಾಗಿದೆ. ಸಹಿ ಸಹ ಮಾಡಬಹುದು. ತಮ್ಮ ಕಾರ್ಯ ಸಂಪನ್ನಾದ ಬಳಿಕ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
5. Project Gutenberg:ಪ್ರಾಜೆಕ್ಟ್ ಗುಟೆನ್‌ಬರ್ಗ್ ಅನ್ನು 1971 ರಲ್ಲಿ ಸ್ವಯಂಸೇವಕರ ಗುಂಪಿನಿಂದ ರಚಿಸಲಾಯಿತು. ಇದು ಡಿಜಿಟಲ್ ರೂಪದಲ್ಲಿ ಪುಸ್ತಕಗಳು ಮತ್ತು ಸಂಗೀತ ಆಲ್ಬಂಗಳನ್ನು ಒಳಗೊಂಡಿದೆ. ನೀವು ಅದರಲ್ಲಿ ಪ್ರಸಿದ್ಧ ಸಾಹಿತ್ಯ ಕೃತಿಗಳನ್ನು ಉಚಿತವಾಗಿ ಓದಬಹುದಾಗಿದೆ.